*ಹೊಸನಗರ ಖಾಸಗಿ ಬಸ್ ಭಸ್ಮ ಅವಘಡ;* *ಜನಪ್ರೀತಿಗೆ ಕಾರಣವಾದ ಕಲಗೋಡು ರತ್ನಾಕರ್ ಸೇವೆ* *ಏನೆಲ್ಲ ಸಹಾಯ ಮಾಡಿದ್ರು ಕಲಗೋಡು?*

*ಹೊಸನಗರ ಖಾಸಗಿ ಬಸ್ ಭಸ್ಮ ಅವಘಡ;*

*ಜನಪ್ರೀತಿಗೆ ಕಾರಣವಾದ ಕಲಗೋಡು ರತ್ನಾಕರ್ ಸೇವೆ*

*ಏನೆಲ್ಲ ಸಹಾಯ ಮಾಡಿದ್ರು ಕಲಗೋಡು?*

ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಬಳಿಯ ಸುಡೂರಿನಲ್ಲಿ ನಡೆದ ಖಾಸಗಿ ಬಸ್ ಬೆಂಕಿ ದುರಂತದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರೂ ಕಾಂಗ್ರೆಸ್ ನಾಯಕರೂ ಆದ ಕಲಗೋಡು ರತ್ನಾಕರ್ ಮೆರೆದ ಮಾನವೀಯತೆ ಸಾಕಷ್ಟು ಜನ ಪ್ರಶಂಸೆಗೆ ಸಾಕ್ಷಿಯಾದರು.

ಹೊಸನಗರದ ನಿಟ್ಟೂರಿನಿಂದ 32 ಜನ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ರಿಪ್ಪನ್ ಪೇಟೆ ಮಾರ್ಗವಾಗಿ ಹೊರಟ ಸಿ.ಅನ್ನಪೂರ್ಣೇಶ್ವರಿ ಸ್ಲೀಪಿಂಗ್ ಕೋಚ್ ಬಸ್ ರಾತ್ರಿ 10.45ರ ಹೊತ್ತಿಗೆ ಸುಡೂರು ಬಳಿಯ 9ನೇ ಮೈಲಿಗಲ್ಲು ಬಳಿ ಬೆಂಕಿ ತಗುಲಿಕೊಂಡು ಭಸ್ಮವಾಗಲು ಆರಂಭಿಸಿತು.

ಅದೃಷ್ಟವಶಾತ್ ಬಸ್ಸಿನ ತುರ್ತು ನಿರ್ಗಮನದ ಬಾಗಿಲು ತೆರೆದುಕೊಂಡಿದ್ದರಿಂದ ತರಾತುರಿಯಲ್ಲಿ ಪ್ರಯಾಣಿಕರು ಹೊರಕ್ಕೆ ಜಿಗಿದರಾದರೂ ಮೂರ್ನಾಲ್ಕು ಜನರಿಗೆ ತಲೆಗೆ ತೀವ್ರ ಪೆಟ್ಟಾಗಿದೆ. ಮತ್ತೆ ಮೂರ್ನಾಲ್ಕು ಜನರಿಗೆ ಶೇ.40 ರಷ್ಟು ಸುಟ್ಟ ಗಾಯಗಳಾಗಿ ನರಳ ತೊಡಗಿದ್ದಾರೆ.

ಈ ಬೆಂಕಿ ಅವಘಡದ ಮಾಹಿತಿ ಕಿವಿಗೆ ತಲುಪುತ್ತಿದ್ದಂತೆಯೇ ಧಾವಿಸಿ ಬಂದ ಕಲಗೋಡು ರತ್ನಾಕರ್ ರವರು ತಮ್ಮ ಕೈಲಾದ ಮತ್ತು ಕೈ ಮೀರಿಯೂ ಸಹಾಯ ಹಸ್ತ ಚಾಚಿದರು.

ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣರವರಿಗೂ ಮಾಹಿತಿ ನೀಡಿ ಅವರಿಂದಲೂ ತೊಂದರೆಯಲ್ಲಿರುವ ಪ್ರಯಾಣಿಕರಿಗೆ ಸಹಾಯ ಸಿಗುವಂತೆ ನೋಡಿಕೊಂಡರು.

ನೋವಿನಲ್ಲಿ ನರಳಾಡುತ್ತಿದ್ದವರಿಗೆ ಪ್ರಥಮ ಚಿಕಿತ್ಸೆ ನೀಡಿಸಿದ್ದಲ್ಲದೇ ವೈದ್ಯಕೀಯ ಅವಶ್ಯಕತೆಯುಳ್ಳವರಿಗೆ ತುರ್ತಾಗಿ ಆ್ಯಂಬುಲೆನ್ಸ್ ಕರೆಗಳನ್ನು ಕರೆಸಿ ಆಸ್ಪತ್ರೆಗಳಿಗೆ ರವಾನಿಸಿದರು.

ರಾತ್ರೋರಾತ್ರಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾದ ಪ್ರಯಾಣಿಕರಿಗೆ ವೈದ್ಯರ ಮೂಲಕ ಅಗತ್ಯ ಚಿಕಿತ್ಸೆ ನೀಡಿಸಿದರು.

ಇಂದು ಬೆಳಿಗ್ಗೆಯೇ ಮತ್ತೆ ಮೆಗ್ಗಾನ್ ಆಸ್ಪತ್ರೆಗೆ ಬಂದು ಪ್ರಯಾಣಿಕರ ಅವಶ್ಯಕತೆಗೆ ತಕ್ಕ ಅನುಕೂಲಗಳನ್ನು ಮಾಡಿಕೊಟ್ಟರು.

ಓರ್ವ ಜನಪ್ರತಿನಿಧಿ ತುರ್ತು ಸೇವೆಗೆ ನಿಂತರೆ ಎಷ್ಟು ಸಹಕಾರಿಯಾಗಬಲ್ಲ ಎಂಬುದಕ್ಕೆ ಕಲಗೋಡು ರತ್ನಾಕರ್ ಪ್ರತ್ಯಕ್ಷ ಸಾಕ್ಷಿಯಾದರು.

ಅವರ ಈ ಸೇವೆ ಸಾಕಷ್ಟು ಜನರ ಹೊಗಳಿಕೆಗೆ ಕಾರಣವಾಗಿದೆ. ಅಭಿನಂದನೆಗಳು ಕಲಗೋಡು ರತ್ನಾಕರ್ ರವರೇ…ನಿಮ್ಮ ಈ ಜನ ಸೇವೆ ಹೀಗೆಯೇ ಮುಂದುವರೆಯಲಿ….