*ತೀರ್ಥಹಳ್ಳಿ ಶ್ರೀಕ್ಷೇತ್ರ ಹೆಗಲತ್ತಿಯಲ್ಲಿ ಮಾ.5ರಿಂದ 8ರವರೆಗೆ ಶ್ರೀ ನಾಗಯಕ್ಷೆದೇವಿ ನವಗ್ರಹ ಮತ್ತು ಶ್ರೀನಾಗದೇವರ 12ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ*

*ತೀರ್ಥಹಳ್ಳಿ ಶ್ರೀಕ್ಷೇತ್ರ ಹೆಗಲತ್ತಿಯಲ್ಲಿ ಮಾ.5ರಿಂದ 8ರವರೆಗೆ ಶ್ರೀ ನಾಗಯಕ್ಷೆದೇವಿ ನವಗ್ರಹ ಮತ್ತು ಶ್ರೀನಾಗದೇವರ 12ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ*

ತೀರ್ಥಹಳ್ಳಿ ತಾಲ್ಲೂಕಿನ ಸಿಂಗನಬಿದರೆ ಬಳಿಯ ಶ್ರೀಕ್ಷೇತ್ರ ಹೆಗಲತ್ತಿಯ ಶ್ರೀ ನಾಗಯಕ್ಷೆ ಸೇವಾ ಸಮಿತಿ ವತಿಯಿಂದ ಶ್ರೀನಾಗಯಕ್ಷೆ ದೇವಿ, ನವಗ್ರಹ ಮತ್ತು ಶ್ರೀನಾಗದೇವರ 12ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮವನ್ನು ಮಾ.5ರಿಂದ 8 ರ ವರೆಗೆ ಹಮ್ಮಿಕೊಳ್ಳಲಾಗಿದೆ.

ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಮತ್ತು ಮೂಲ ಪಾತ್ರಿಗಳಾದ ಶ್ರೀಶಾರದಮ್ಮರವರ ದಿವ್ಯ ಪೂರ್ಣಾನುಗ್ರಹದೊಂದಿಗೆ ಹಾಗೂ ಪಾತ್ರಿಗಳಾದ ಶ್ರೀಕಲ್ಪನಮ್ಮನವರ ಉಪಸ್ಥಿತಿಯಲ್ಲಿ ಈ ಉತ್ಸವ ನಡೆಯಲಿದೆ.

ಇದೇ ಸಂದರ್ಭದಲ್ಲಿ ಶ್ರೀಗುತ್ಯಮ್ಮ ಪ್ರಸಾದಿತಾ ಯಕ್ಷಗಾನ ಮಂಡಳಿಯಿಂದ ನಾಗಮಂಡಲ ಎಂಬ ಯಕ್ಷಗಾನ ನಡೆಯಲಿದೆ.

ಮಾ.8 ರಂದು ಬೆಳಿಗ್ಗೆ 9ಕ್ಕೆ ಶ್ರೀಪಲ್ಲಕ್ಕಿ ದೇವರುಗಳ ಆರಾಧನೆ,ಮಹಾ ಮಂಗಳಾರತಿ, ಸ್ವಸ್ಥಾನಕ್ಕೆ ನಿರ್ಗಮನ ನಡೆಯಲಿದೆ.

ಪಲ್ಲಕ್ಕಿ ದೇವರಿಗೆ ಮಡಲಕ್ಕಿ ನೀಡಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಭಕ್ತಾಧಿಗಳು 9482474343/9986573989/9482701855 ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.