ಡಿಸಿಎಂ ಡಿಕೆ ಶಿವಕುಮಾರ್ ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ – ಶುಭ ಹಾರೈಕೆ*
*ಡಿಸಿಎಂ ಡಿಕೆ ಶಿವಕುಮಾರ್ ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ – ಶುಭ ಹಾರೈಕೆ*

*ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ಪೋಸ್ಟರನ್ನು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಶಿವಮೊಗ್ಗ ನಗರದ ಕಿಮ್ಮನೆ ರೆಸಾರ್ಟ್ ನಲ್ಲಿ ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಪ್ರಧಾನ ಸಂಚಾಲಕರಾದ ಕೆ ರಂಗನಾಥ್ , ಗೌರವ ಸಂಚಾಲಕರಾದ ಎಚ್ ಪಾಲಾಕ್ಷಿ, ಸಿ ರವಿ ಹಾಪ್ ಕಾಮ್ಸ್ನ ಅಧ್ಯಕ್ಷರಾದ ವಿಜಯಕುಮಾರ್ ದನಿ, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ನಮ್ಮೂರ ಬಳಗದ ಸಂಚಾಲಕರಾದ ಹೆಚ್ ಪಿ ಗಿರೀಶ್, ಟಿ ಗುರುಪ್ರಸಾದ್, ದಿವಾಕರ್, ರಜನಿಕಾಂತ್ ಕೆ ಎಲ್ ಪವನ್ ಹಾಗೂ ಇತರರು ಇದ್ದರು.


