ಕುವೆಂಪು ವಿವಿಯ ವನ್ಯಜೀವಿ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ ಕಾರ್ಯಾಗಾರ* *ಪರಿಸರ ಸಮತೋಲನಕ್ಕೆ ಸಕಲ ಜೀವಿಗಳೂ ಅಗತ್ಯ: ಪ್ರೊ ವೆಂಕಟೇಶ್*

*ಕುವೆಂಪು ವಿವಿಯ ವನ್ಯಜೀವಿ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ ಕಾರ್ಯಾಗಾರ*

*ಪರಿಸರ ಸಮತೋಲನಕ್ಕೆ ಸಕಲ ಜೀವಿಗಳೂ ಅಗತ್ಯ: ಪ್ರೊ ವೆಂಕಟೇಶ್*

ಭೂಮಂಡಲವು ಜೀವವಿವಿಧ್ಯತೆಯ ಆಗರ. ಜೀವ ಜಗತ್ತಿನ ಸಮತೋಲನವನ್ನು ಕಾಪಾಡುವಲ್ಲಿ ಪ್ರತಿಯೊಂದು ಜೀವಿಯು ತನ್ನದೇ ಆದ ಪಾತ್ರ ವಹಿಸಿವೆ ಎಂದು ಬೆಂಗಳೂರು ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕ ಪ್ರೊ. ಎಂ ಜಿ ವೆಂಕಟೇಶ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣೆ ವಿಭಾಗದ ವತಿಯಿಂದ ‘ವನ್ಯಜೀವಿಗಳ ಅಧ್ಯಯನಕ್ಕೆ ಅವಶ್ಯವಿರುವ ಕ್ಷೇತ್ರಕಾರ್ಯ ತಂತ್ರಗಳು’ ಎಂಬ ವಿಷಯ ಕುರಿತು ಏರ್ಪಡಿಸಿರುವ 3 ದಿನಗಳ ಕಾರ್ಯಾಗಾರವನ್ನು ಮಂಗಳವಾರ ಚಾಲನೆಗೊಳಿಸಿ ಅವರು ಮಾತನಾಡಿದರು.

ಜೀವಜಾಲದಲ್ಲಿನ ಆಹಾರ ಸರಪಳಿಯ ಕೊಂಡಿ ವನ್ಯಜೀವಿಗಳನ್ನೇ ಅವಲಂಭಿತವಾಗಿವೆ. ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನೀಯ ಅವುಗಳ ಸಂರಕ್ಷಣಾ ನಮ್ಮೆಲರ ಹೊಣೆ. ಮನುಷ್ಯ-ವನ್ಯಜೀವಿ ಸಂಘರ್ಷಕ್ಕೆ ಕಾರಣಗಳು, ಅದರ ಪರಿಣಾಮ ಮತ್ತು ಅದರ ನಿರ್ವಹಣೆಯ ಬಗ್ಗೆ ಪ್ರೊ. ಎಂ. ಜಿ. ವೆಂಕಟೇಶ ಅವರು ಮಾತನಾಡಿದರು.

ಕುವೆಂಪು ವಿವಿ ಕುಲಪತಿ ಪ್ರೊ. ಎಸ್ ವಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವನ್ಯಜೀವಿಗಳಲ್ಲಿನ ಜೈವಿಕ ಗಡಿಯಾರ ಮಾನವನ ಜೀವನಕ್ಕೆ ಆಧಾರ. ವನ್ಯಜೀವಿ ಸಂರಕ್ಷಣೆಯಲ್ಲಿ ಮಾನವನ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.

ಬೆಂಗಳೂರಿನ ನೇಚರ್ ಕನ್ಸರ್ವೇಷನ್ ಫೌಂಡೇಶನ್ನ ಶ್ರವಣ್ ಸುತಾರ್, ಕಿರಣ್ ಪ್ರಭು, ಪ್ರಣವ್, ಪ್ರದೀಪ ಹೊಲೆಮಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

  • ಭದ್ರ ವನ್ಯಜೀವಿ ವಿಭಾಗದ ವೀರೇಶ್ ಗೌಡ ಪೊಲೀಸ್ ಪಾಟೀಲ್, ಕುಲಸಚಿವರಾದ ವಿ ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ ಎಸ್ ಎಂ ಗೋಪಿನಾಥ್, ವನ್ಯಜೀವಿ ಮತ್ತು ನಿರ್ವಹಣೆ ವಿಭಾಗದ ಅಧ್ಯಕ್ಷರಾದ ಪ್ರೊ. ವಿಜಯ್ ಕುಮಾರ್, ಡಾ.‌ ಪ್ರಮೋದ್, ಡಾ ಹರೀಶ, ಡಾ ರಾಘವೇಂದ್ರ ಗೌಡ, ಸೌಮ್ಯ, ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.