ಕಾಂತರಾಜ ಆಯೋಗದ ವರದಿಗೆ ಅಪಮಾನ ಮಾ-11ಪ್ರತಿಭಟನಾ ಪ್ರದರ್ಶನ : ಹಕ್ಕೊತ್ತಾಯ*
*ಕಾಂತರಾಜ ಆಯೋಗದ ವರದಿಗೆ ಅಪಮಾನ ಮಾ-11ಪ್ರತಿಭಟನಾ ಪ್ರದರ್ಶನ : ಹಕ್ಕೊತ್ತಾಯ*
ಶಿವಮೊಗ್ಗ, ಮಾ-05 ಕಾಂತರಾಜ ಆಯೋಗದ ವರದಿ ಸಲ್ಲಿಕೆ ಹಿನ್ನೆಲೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ ಸಂವಿಧಾನ ವಿರೋಧಿ ಹೇಳಿಕೆಯನ್ನು ವಿರೋಧಿಸಿ ಮಾಚ್೯-11ರಂದು ಸೋಮವಾರ ಹಿಂದುಳಿದ ಜನ ಜಾಗೃತಿ ವೇದಿಕೆ ಪ್ರತಿಭಟನಾ ಪ್ರದಶ೯ನ ಹಾಗು ಹಕ್ಕೊತ್ತಾಯ ಕಾಯ೯ಕ್ರಮ ಹಮ್ಮಿಕೊಂಡಿದೆ.
ಅಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಿಗ್ಗೆ ಹನ್ನೊಂದು ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಿ ಕಾಂತರಾಜ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೊಳಿಸುವಂತೆ ಸಕಾ೯ರವನ್ನು ಒತ್ತಾಯಿಸಲು ಇಂದು ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಸಭೆ ಸೇರಿದ್ದ ಜನಜಾಗೃತಿ ವೇದಿಕೆ ಕಾಯ೯ಕಾರಿ ಮಂಡಳಿ ತೀಮಾ೯ನಿಸಿತು.
ಆಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕರಾದ ಶಾಮನೂರು ಶಿವಶಂಕರಪ್ಪ ಸಂವಿಧಾನಬದ್ಧ ಹಾಗು ಸುಪ್ರೀಂ ಕೋರ್ಟ್ ಸೂಚನೆಯಡಿ ಸಕಾ೯ರದಿಂದ ರಚನೆಗೊಂಡು ಕಾಯ೯ನಿವ೯ಹಿಸಿರುವ ಆಯೋಗದ ವರದಿಯನ್ನು “ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿ” ಎಂದು ಅವಹೇಳನ ಮಾಡಿರುವುದು ಭಾರತದ ಸಂವಿಧಾನಕ್ಕೆ ತೋರಿದ ಅಗೌರವ ಹಾಗು ಸಂವಿಧಾನಬದ್ಧ ಆಯೋಗ ಮತ್ತು ಹಿಂದುಳಿದ ಜಾತಿ-ವಗ೯ಗಳಿಗೆ ಮಾಡಿದ ಅವಮಾನ ಎಂದು ಸಭೆ ತೀವ್ರವಾಗಿ ಖಂಡಿಸಿತು.
ಕಾಂತರಾಜ ಆಯೋಗದ ವರದಿಯನ್ನು ಕಸವೆಂದು ಜರಿದು ಧಿಮಾಕಿನ ಮಾತನಾಡಿ ಅಗೌರವ ತೋರುವ ಮೂಲಕ ರಾಜ್ಯದ ಹಿಂದುಳಿದ ಜಾತಿ-ವಗ೯ಗಳ ಜನರ ಸ್ವಾಭಿಮಾನ ಕೆಣಕಿರುವ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಭೆ ಸಕಾ೯ರವನ್ನು ಆಗ್ರಹ ಪಡಿಸಿತು.
ಸಭೆಯಲ್ಲಿ ಮಾತನಾಡಿದ ಜನಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ.ಹೆಚ್. ರಾಚಪ್ಪ ಹಾಗು ಅಧ್ಯಕ್ಷ ತೀ.ನ. ಶ್ರೀನಿವಾಸ್ ಕಾಂತರಾಜ ಆಯೋಗದ ವರದಿಯನ್ನು ಬೆಂಬಲಿಸದೆ ವಿರೋಧಿಸುವ ಯಾವುದೇ ಪಕ್ಷದ ಅಭ್ಯರ್ಥಿಗಳನ್ನು ಮುಂಬರುವ ಚುನಾವಣೆಗಳಲ್ಲಿ ಕಡ್ಡಾಯವಾಗಿ ಸೋಲಿಸುವ ನಿಟ್ಟಿನಲ್ಲಿ ತೀವ್ರತರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಉಪಾಧ್ಯಕ್ಷರುಗಳಾದ ಪ್ರೊ. ಉಮೇಶ್ ಯಾದವ್ ಪ್ರೊ. ಪ್ರಭಾಕರ್ ಪ್ರೊ. ಕಲ್ಲನ ಸಂಚಾಲಕರುಗಳಾದ ಬಿ. ಜನಮೇಜಿರಾವ್ ಆರ್.ಟಿ. ನಟರಾಜ್ ಸಂಘಟನಾ ಕಾಯ೯ದಶಿ೯ ಚನ್ನವೀರಪ್ಪ ಗಾಮನಗಟ್ಟಿ ಸಭೆಯಲ್ಲಿ ಮಾತನಾಡಿದರು.