ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿ; ಆಯನೂರು ಪರ ಕೆಲಸ ಮಾಡೋಲ್ಲ ಎಂದ ಎಸ್.ಪಿ.ದಿನೇಶ್- ರಂಗಸ್ವಾಮಿ ಗೌಡ

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿ;

ಆಯನೂರು ಪರ ಕೆಲಸ ಮಾಡೋಲ್ಲ ಎಂದ ಎಸ್.ಪಿ.ದಿನೇಶ್- ರಂಗಸ್ವಾಮಿ ಗೌಡ

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪತ್ರಿಕಾಗೋಷ್ಠಿ

*ಎಸ್.ಪಿ.ದಿನೇಶ್, ಉಪಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ*

ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಘೋಷಣೆಯಾಗಿದೆ. ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಪಕ್ಷದ ಅಭ್ಯರ್ಥಿ ಬದಲಾಯಿಸಬೇಕು. ಹೆಸರನ್ನು ಮರು ಪರಿಶೀಲಿಸಬೇಕು

ನನ್ನ ಓಟು ಈಶ್ವರಪ್ಪರಿಗೆ ಅಂತ ಘೋಷಿಸಿರೋ ವ್ಯಕ್ತಿಗೆ ಕಾಂಗ್ರಸ್ ಟಿಕೇಟ್. ಈಶ್ವರಪ್ಪ ನಮಗೆ ಎದುರಾಳಿಯಲ್ಲ. ಬಿಜೆಪಿ ಎದುರಾಳಿ ನಮಗೆ. ಕಿಚಾಯಿಸಿ ಈಶ್ವರಪ್ಪ ಸ್ಪರ್ಧೆ ಮಾಡುವಂತಾಯ್ತು. ಆಶ್ಚರ್ಯಕರ ಹೇಳಿಕೆ.

ಕೆಪಿಸಿಸಿ ಅಧ್ಯಕ್ಷರ ಗಮನಕ್ಕೇ ಬಾರದೇ ಟಿಕೇಟ್ ಘೋಷಣೆಯಾಗಿದೆ. ಆದೇಶ ಪ್ರತಿ ಕೂಡ ಅವರು ಗಮನಿಸಿರಲಿಲ್ಲ. ಅದನ್ನು ತೋರಿಸಿದೆ. ಮತ್ತೊಮ್ಮೆ 30 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಸಿದ್ದರೆ ನಾನು ಮತ್ತು ರಂಗಸ್ವಾಮಿ ಗೌಡರು.

ಒಂದೇ ಒಂದು ಜಿಲ್ಲೆಗೆ ಒಂದೇ ಒಂದು ಅರ್ಜಿ ಕಳಿಸಿಲ್ಲ. ಠೇವಣಿ ಕಳೆದುಕೊಂಡ ವ್ಯಕ್ತಿಗೆ ಟಿಕೇಟ್ ಆಶ್ಚರ್ಯಕರ. ಕಳೆದ ಬಾರಿ ಸಿದ್ದರಾಮಯ್ಯರಿಗೆ ಜೈಲಿಗೆ ಕಳಿಸ್ತೀನಿ ಅಂತ ತೊಡೆ ತಟ್ಟಿದ ವ್ಯಕ್ತಿ. ಗೋಡ್ಸೆ ಪ್ರಿಯ ವ್ಯಕ್ತಿಯ ಪರವಾಗಿ ಹೇಗೆ ಮತ ಕೇಳೋದು?

ನಿನ್ನ ಅಭ್ಯರ್ಥಿ ಮಾಡೋ ಜವಾಬ್ದಾರಿ ನಂದು ಎಂದು ಕೆಪಿಸಿಸಿ ಅಧ್ಯಕ್ಷರು ಬಹಳ ಬಾರಿ ಹೇಳಿದ್ದಕ್ಕೆ ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಗುರುತಿನ ಚೀಟಿಗಳನ್ನು ಎಲ್ಲ ಮತದಾರರಿಗೂ ರವಾನಿಸಿದ್ದೇನೆ. ಈಗ ಗೊಂದಲವಾಗುತ್ತದೆ.

ಕೂಡಲೇ ಅಭ್ಯರ್ಥಿಯನ್ನು ಬದಲಾಯಿಸಬೇಕು. ಬದಲಾವಣೆ ಆಗುತ್ತೆ ಅಂತ ಆಶಾವಾದವಿದೆ. ಎಐಸಿಸಿ ಆದೇಶ ಕೆಪಿಸಿಸಿಗೆ ಬಂದಿಲ್ಲ. ಕೆಪಿಸಿಸಿ ಅಧ್ಯಕ್ಷರ ಗಮನಕ್ಕೇ ಬಂದಿಲ್ಲ. ಅವರನ್ನು ಬದಲಾವಣೆ ಮಾಡಲೇಬೇಕು. ಸಾಮಾನ್ಯ ಕಾರ್ಯಕರ್ತರನ್ನು ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಾರೆ. ಈಗ ಕಾಂಗ್ರೆಸ್ ಪರ ಅಭ್ಯರ್ಥಿ.
ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿಯೂ ವಿರೋಧ ಮಾಡಿದ್ದೇನೆ.

ಘೋಷಣೆ ಆದ ಅಭ್ಯರ್ಥಿ ಬದಲಾವಣೆ ಹಿಂದೆಲ್ಲ ಆಗಿದೆ. ಈಗಿನ ಘೋಷಿತ ಅಭ್ಯರ್ಥಿಯ ಹೆಸರನ್ನು ತಡೆಹಿಡಿಯಬೇಕು. ಹೆಸರು ಬೇರೆ ಘೋಷಿಸಬೇಕು

ಮೂರ್ನಾಲ್ಕು ತಿಂಗಳ ಜಾತ್ರೆ ಮಾಡಲು ಬಂದವರಿಗೆ ಟಿಕೇಟ್ ನೀಡಲಾಗಿದೆ. ಜಿಲ್ಲಾಧ್ಯಕ್ಷರು ಟಿಕೇಟ್ ಘೋಷಣೆಯ ನಂತರ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ನಾನು ಮೂಲ ಕಾಂಗ್ರೆಸ್ ನ ಲಿಂಗಾಯತ. ಆಕಡೆ ಈಕಡೆ ಓಡಾಡೋ ಲಿಂಗಾಯತ ಅಲ್ಲ. ಇದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲ್ಲ.

ಈಶ್ವರಪ್ಪ ಹಿಂದುಳಿದ ವರ್ಗಕ್ಕೆ ಸೇರಿದವರು. ಈಗ ಅವರನ್ನು ಕಿಚಾಯಿಸಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಬಿಜೆಪಿಯ ಅಭ್ಯರ್ಥಿಯಾಗೇ ಅವರು ಹಿಂದೆ ಸೋತವರು. ಈಗ ಹಿಂದುಳಿದ ವರ್ಗಗಳ ಮತಗಳ ಮೇಲೆ ಈಶ್ವರಪ್ಪ ಪ್ರಭಾವ ಬೀರಿದರೆ ಕಾಂಗ್ರೆಸ್ ಗೆ ತೊಂದರೆಯಾಗಲಿದೆ.

ನಾವು ಏಳು ತಿಂಗಳುಗಳಿಂದ ಶ್ರಮಪಟ್ಟಿದ್ದೇವೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ.

ಹಕ್ಕಿನಿಂದ ಕೇಳುತ್ತಿದ್ದೇವೆ. ನಮ್ಮನೆ ಯಜಮಾನರಿಗೆ ನಮ್ಮ ನೋವು ಹೇಳುತ್ತೇವೆ. ನಮ್ಮ ಬಗ್ಗೆ ಹಿಂದೆಲ್ಲ ಏನು ಮಾತಾಡಿದ್ದಾರೆಂದು ಗೊತ್ತಿದೆ. ಟಿಕೆಟ್ ಸಿಗುವ ಅಧಿಕೃತತೆ ಸಿಕ್ಕಿ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇಂಥವರಿಗೆ ನಾನು ಚುನಾವಣೆ ಮಾಡುವುದಿಲ್ಲ. ಬದಲಾವಣೆ ಸಾಧ್ಯವಾಗದಿದ್ದರೆ ಮುಂದಿನ ನಿರ್ಧಾರ ಮಾಡ್ತೀವಿ.
ಈ ಚುನಾವಣೆಯಲ್ಲಿ ನಾವು ಇವರ ಪರ ನಿಲ್ಲುವುದಿಲ್ಲ. ನಮ್ಮ ಪರವಾಗಿ ದುಡಿದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಗ್ಗೆ ಎಲ್ಲ ನಾಯಕರಿಗೂ ತಿಳಿಸಿದ್ದೇವೆ.

*ರಂಗಸ್ವಾಮಿ ಗೌಡ( ನೈರುತ್ಯ ಪದವೀಧರ ಕ್ಷೇತ್ರದ ಮತ್ತೋರ್ವ ಅಪೇಕ್ಷಿತ);*

ಕಾಂಗ್ರೆಸ್ ನಲ್ಲಿ ತೆರೆಮರೆಯಲ್ಲಿದ್ದೇ ಕೆಲಸ ಮಾಡಿಕೊಂಡು ಬಂದೆ. ಕಳೆದ ಐದು ವರ್ಷಗಳಿಂದ ನೈರುತ್ಯ ಚುನಾವಣೆಗೆ ಸಿದ್ಧತೆ ಮಾಡಿದ್ದೆ.
ಇಬ್ಬರೇ ಇದ್ದಿದ್ದು. ಆಯನೂರು ಮಂಜುನಾಥ್ ರವರ ಸೇರ್ಪಡೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದರು.

ನಮ್ಮ ಪಕ್ಷ ನಮ್ಮ ಹಕ್ಕು. ಕಾರ್ಯಕರ್ತರಿಗೆ ಯಾರಿಗಾದರೂ ಕೊಡಿ. ಅವಕಾಶಕ್ಕೋಸ್ಕರ ಬಂದು ಅಭ್ಯರ್ಥಿಗಳಾದವರಿಗೆ ಮಣೆ ಹಾಕುವುದಾದರೆ ನಮಗೇನು ಬೆಲೆ? ಎಲ್ಲದೂ ಅನುಭವಿಸಿದ್ದಾರೆ. ಈಗ ಮನೆಗಿರಬಹುದು. ಈಶ್ವರಪ್ಪರಿಗೆ ಓಟು ಹಾಕ್ತೀನಿ ಅಂದೋರಿಗೆ ನಾವು ಓಟು ಕೇಳುವುದು ಹೇಗೆ?

ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲವಿದೆ. ಇಬ್ಬರಲ್ಲಿ ಒಬ್ಬರಿಗೆ ಕೊಟ್ಟರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ. ದಶಕಗಳಿಂದ ಕೆಲಸ ಮಾಡುತ್ತಿರುವವರನ್ನು ಪರಿಗಣಿಸಿ

ಕೆಪಿಸಿಸಿ ಅಧ್ಯಕ್ಷರು ಆದೇಶ ಬಂದಿದೆ ಎಂದು ಅಧಿಕೃತ ಮಾಡಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ;
ವಿಶ್ವನಾಥ ಕಾಶಿ, ಜ್ಯೋತಿ ಅರಳಪ್ಪ, ಸತೀಶ್, ಕುಮಾರ್, ಎಸ್ ಎ ಬಾಬು