*ತ್ಯಾವರೆಕೊಪ್ಪದಲ್ಲಿ ಪಶು ವೈದ್ಯೆ ಸಾವು* *ಸಚಿವ ಮಧು ಬಂಗಾರಪ್ಪ ಸಂತಾಪ*

*ತ್ಯಾವರೆಕೊಪ್ಪದಲ್ಲಿ ಪಶು ವೈದ್ಯೆ ಸಾವು*

*ಸಚಿವ ಮಧು ಬಂಗಾರಪ್ಪ ಸಂತಾಪ*

ಶಿವಮೊಗ್ಗ ತಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೀರಾನೆ ದಾಳಿಯಿಂದ ಯುವ ಪಶುವೈದ್ಯ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಂತಾಪ ಸೂಚಿಸಿದ್ದಾರೆ.

ತಮ್ಮ ವೃತ್ತಿ ಬದುಕನ್ನು ವನ್ಯಜೀವಿಗಳ ಸೇವೆಗೆ ಮುಡಿಪಾಗಿಟ್ಟ ಯುವ ವೈದ್ಯಯನ್ನು ಕಳೆದುಕೊಂಡಿರುವುದು ಕೇವಲ ಅವರ ಕುಟುಂಬ ಮತ್ತು ಇಲಾಖೆಗೆ ನಷ್ಟವಲ್ಲದೆ ಇಡೀ ಸಮಾಜಕ್ಕೆ ಆದ ನಷ್ಟ, ಇಂತಹ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಸರ್ಕಾರ ನಿಲ್ಲಲಿದ್ದು, ಈಗಾಗಲೇ ಅರಣ್ಯ ಸಚಿವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಈ ಸಂದರ್ಭದಲ್ಲಿ ದೇವರು ಅವರ ಅಗಲಿಕೆಯನ್ನು ಬರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಹಾಗೂ ಅವರ ಸಹಪಾಠಿಗಳಿಗೆ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.