*ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಚೈತನ್ಯ ಶಿಬಿರ*
*ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಚೈತನ್ಯ ಶಿಬಿರ*

ಜನಸ್ನೇಹಿ ಪೊಲೀಸ್ ಮತ್ತು ಸಮಾಜಮುಖಿ ಪೊಲೀಸ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ತಮ್ಮ ದೈನಂದಿನ ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ , ಕುಟುಂಬದ ಬಗ್ಗೆ ಯೋಚಿಸದೆ ಕಾರ್ಯನಿರ್ವಹಿಸುವ ಭರದಲ್ಲಿ, ತಮ್ಮ ದೈಹಿಕ ಆರೋಗ್ಯ ಮಾನಸಿಕ ಒತ್ತಡ ನಿರ್ವಹಿಸುವಲ್ಲಿ ಹೆಚ್ಚಿನ ಪೊಲೀಸರು ವಿಫಲರಾಗುತ್ತಾರೆ.
ಅದರನ್ವಯ ಸ್ಥೂಲಕಾಯ, ಬೊಜ್ಜು , ಅಧಿಕ ರಕ್ತದೊತ್ತಡ , ಸಕ್ಕರೆ ಕಾಯಿಲೆ , ಮಾನಸಿಕ ಒತ್ತಡ, ಸರಿಯಾದ ರೀತಿಯಲ್ಲಿ ಆಹಾರಪದ್ಧತಿ ಅಳವಡಿಸಿಕೊಳ್ಳದೆ ಇರುವುದು ಕಂಡು ಬಂದಿರುತ್ತದೆ. ಅದರನ್ವಯ , ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯಲಿ ಜಿಲ್ಲಾ ವರಿಷ್ಠಾಧಿಕಾರಿಯಾದ ನಿಖಿಲ್ ಕುಮಾರ್ IPS ರವರು ಪೊಲೀಸ್ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಕಾರ್ಯರೂಪಕ್ಕೆ ತಂದಿದ್ದಾರೆ . ಇದರನ್ವಯ ಈ ಒಂದು ತಿಂಗಳ ಪ್ರಾಯೋಗಿಕ ಕಾರ್ಯಾಗಾರದಲ್ಲಿ ವಿಶೇಷವಾಗಿ BMI ಆರೋಗ್ಯ ಮಾರ್ಗಸೂಚಿ ಅನುಸಾರ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಗುರುತಿಸಿದ್ದು, ಇವರಿಗಾಗಿ ಒಂದು ಪ್ರಗತಿ ಕಾರ್ಡ್ (ಹೆಲ್ತ್ ಕಿಟ್) ಅನ್ನು ಸಹ ತಯಾರು ಮಾಡಿದ್ದು, ಈ ತಂಡದಲ್ಲಿ ವರಿಷ್ಠಾಧಿಕಾರಿಗಳು , ಪರಿಣಿತ ವೈದ್ಯರು , ಮಾನಸಿಕ ಆರೋಗ್ಯ ಪರಿಣಿತರು , ಆಹಾರ ಪದ್ಧತಿಯ ವಿಶೇಷ ವೈದ್ಯರು , ಯೋಗ ಪಂಡಿತರು ಹಾಗೂ ದೈಹಿಕ ಜಿಂಬಾ ಸಲಹೆಗಾರರು ಇವರ ತಂಡವು ಕಾರ್ಡ್ ಸಿದ್ಧಪಡಿಸಿದೆ.
ವಿಶೇಷ ವಾಗಿ ಹೆಲ್ತ್ ಕಾರ್ಡ್ ನಲ್ಲಿ ನಿಯಮಿತ ಆಹಾರ ಪದ್ಧತಿಯ ನಿರ್ವಹಣೆ ಮಾನಸಿಕ ಒತ್ತಡ, ನಿರ್ವಹಣೆಯ ಸುಲಭ ಉಪಾಯಗಳು, ಆರೋಗ್ಯಕರ ಚಿಂತನೆಗಳು ಬೆಳೆಸಿಕೊಳ್ಳುವ ವಿಧಾನಗಳು, ಸುಧಾರಿತ ವ್ಯಾಯಾಮ ಕ್ರಮಗಳನ್ನು ಒಳಗೊಂಡಿದೆ.
ಪೊಲೀಸರಲ್ಲಿ ಸ್ಥಿರ ಆರೋಗ್ಯ ಚೈತನ್ಯಯುತ ಜೀವನ ನಡೆಸಲು ವ್ಯವಸ್ಥಿತ ರೂಪುರೇಷೆಗಳನ್ನು ನಿಖಿಲ್ ಕುಮಾರ್ SP ಅವರು ವಿಶೇಷ ಕಾಳಜಿವಹಿಸಿ ಸಿದ್ಧಪಡಿಸಿದ್ದಾರೆ.
ಇದರಂತೆ ಕಾರ್ಯಾಗಾರದ ಪೂರ್ವದಲ್ಲಿ ವಿಶೇಷ ತಪಾಸಣೆ ಮಾಡುವುದು ಜೊತೆಗೆ ನಮೂದಿಸುವುದು ಹಾಗೂ ಕಾರ್ಯಾಗಾರದ ನಂತರದಲ್ಲಿನ ಬದಲಾವಣೆಯನ್ನು ನಮೂದಿಸಿ ಆದಂತಹ ಬೆಳವಣಿಗೆಯನ್ನು ಅವಲೋಕಿಸಿ ಮಾರ್ಗದರ್ಶನ ನೀಡುವುದು.
ಮುಂದಿನ ದಿನಗಳಲ್ಲಿ ಪೊಲೀಸರು ಸಂಪೂರ್ಣವಾಗಿ ಅನುಸರಿಸಿ ತಮ್ಮ ದಿನನಿತ್ಯದಲ್ಲಿ ಅಳವಡಿಸಿಕೊಂಡು ಸದೃಢ ದೇಹ ಹಾಗೂ ಮಾನಸಿಕ ಒತ್ತಡ ನಿರ್ವಹಣೆಯ ಸುಲಭ ಕ್ರಮಗಳನ್ನು ಉಪಯೋಗಿಸಿಕೊಂಡು ಆರೋಗ್ಯಕರ ಜೀವನ ನಡೆಸುವುದರೊಂದಿಗೆ ಪೊಲೀಸರಲ್ಲಿ ಹೊಸ ಉತ್ಸಾಹ ನವಚೈತನ್ಯ ಹೆಚ್ಚಿನ ಕಾರ್ಯಕ್ಷಮತೆ ಸದೃಢ ಪೋಲಿಸ್ ವ್ಯವಸ್ಥೆಯನ್ನು ಒಂದು ಹೊಸ ಜೀವನ ಕ್ರಮವನ್ನಾಗಿ ಮಾಡುವುದೇ ಈ ಕಾರ್ಯಾಗಾರದ ಮುಖ್ಯ ಗುರಿಯಾಗಿದೆ.
ಕಾರ್ಯಕ್ರಮದಲ್ಲಿ : ನಿಖಿಲ್ ಕುಮಾರ್ IPS, ಗೋಪಾಲ D ವೈದ್ಯರು NH ಆಸ್ಪತ್ರೆ, ಶ್ರೇಯಸ್ ಆಹಾರ ತಜ್ಞರು ಸರ್ಜಿ ಆಸ್ಪತ್ರೆ, ಸಂಧ್ಯಾ D ಅರವಳಿಕೆ ವಿಭಾಗ ಸುಬ್ಬಯ್ಯ ಆಸ್ಪತ್ರೆ , ಗೋಪಾಲ ಕೃಷ್ಣ ಎಸ್ ಯೋಗ ಗುರುಗಳು, ಶ್ರೀ ಸುದರ್ಶನ ಕೆ ಏರೋಬಿಕ್ ಪರಿಣಿತರು. ಶ್ರೀ ರಮೇಶ್ ಕುಮಾರ ASp, ಬಾಬು ಅಂಜನಪ್ಪ DYSP , ದಿಲೀಪ್ SV DYSP DAR , ಜಿಲ್ಲಾ ಕೇಂದ್ರದ ಇನ್ಸ್ಪೆಕ್ಟರ ಗಳು ಮತ್ತು ಅಧಿಕಾರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.


