ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ತಾಯತದಂತೆ ಕೆಲವರು;
ಅಪ್ಪಿಕೊಳ್ಳುತ್ತಿದ್ದಂತೆಯೇ
ಸಿಕ್ಕೇಬಿಡುವುದು
ನೆಮ್ಮದಿಯು!

2.
ವೇದ
ಬಲ್ಲವರಿಗಿಂತ
ವೇದನೆ
ಬಲ್ಲವರಿಗೆ
ಸ್ವರ್ಗವೂ

3.
ಕೆಲ ಗಾಯಗಳಿಗೆ
ಶತಮಾನದ ಇತಿಹಾಸವಿದೆ
ಹೃದಯವೇ…

ಕಾಲದ
ಮುಲಾಮೂ ಕೆಲಸ ಮಾಡುವುದಿಲ್ಲ
ಎಲ್ಲಾ ಗಾಯಗಳಿಗೂ…

4.
ನಿನಗೆ ನೀನೇ ಖುಷಿಯಾಗಿಡು;
ಈ ಜವಾಬ್ದಾರಿ
ಮತ್ತೊಬ್ಬರ ಹೆಗಲಿಗೆ
ದಾಟಿಸದಿರು
ಹೃದಯವೇ…

– *ಶಿ.ಜು.ಪಾಶ*
8050112067
(7/4/2026)