*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾರವರ ಕಚೇರಿ- ಮನೆ- ತೋಟ-ಶಾಲೆ ಮೇಲೆ ಲೋಕಾಯುಕ್ತ ದಾಳಿ* *ದಾಳಿ ಸ್ವಾಗತಿಸಿದ ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ*

*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾರವರ ಕಚೇರಿ- ಮನೆ- ತೋಟ-ಶಾಲೆ ಮೇಲೆ ಲೋಕಾಯುಕ್ತ ದಾಳಿ*

*ದಾಳಿ ಸ್ವಾಗತಿಸಿದ ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ*

ಶಿವಮೊಗ್ಗ ಜಿಲ್ಲಾ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ಶೋಭಾರವರ ಮನೆ, ಕಚೇರಿ, ತೋಟ, ಫಾರ್ಮ್ ಹೌಸ್, ಅವರ ಶಾಲೆ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಚಳಿ ಬಿಡಿಸಿರುವುದು ಸ್ವಾಗತಾರ್ಹ ಎಂದು ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯ ಹನುಮಂತಪ್ಪ ಯಡವಾಲ ಸ್ವಾಗತಿಸಿದ್ದಾರೆ.

ಬಿಸಿಎಂ ಜಿಲ್ಲಾ ಅಧಿಕಾರಿಯಾಗಿ ಶಿವಮೊಗ್ಗಕ್ಕೆ ಬಂದಾಗಿನಿಂದಲೂ ಶೋಭಾರವರು ಹಿಂದುಳಿದ ವರ್ಗಗಳ ಮಕ್ಕಳು ನರಕ ಅನುಭವಿಸುವಂತಾಗಿತ್ತು. ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ. ದಾಸ್ತಾನುಗಳ ಬಗ್ಗೆ ನಾನೇ ಸರ್ಕಾರದ ಗಮನ ಸೆಳೆದಿದ್ದೆ. ಇದೀಗ ಲೋಕಾಯುಕ್ತ ಪೊಲೀಸರು ಅನಿರೀಕ್ಷಿತ ದಾಳಿಯನ್ನು ಮಾಡಿರುವುದು ನಿರ್ಮಾಣವಾಗಿದ್ದ ಅವ್ಯವಸ್ಥೆಗೆ ಚುಚ್ಚುಮದ್ದು ನೀಡುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶೋಭಾರವರು ರಾಜಕೀಯವಾಗಿಯೂ ಪ್ರಭಾವಶಾಲಿಯಾಗಿದ್ದು, ಆ ಪ್ರಭಾವ ಬಳಸಿ ಲೋಕಾಯುಕ್ತ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಶೋಭಾರವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹನುಮಂತಪ್ಪ ಯಡವಾಲ ಒತ್ತಾಯಿಸಿದ್ದಾರೆ.