*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮೇಲೆ ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಪತ್ತೆ* *ನಗದು ಎಷ್ಟಿತ್ತು? ಚಿನ್ನಾಭರಣವೆಷ್ಟಿತ್ತು? ಇದ್ದ ವಾಹನಗಳ ಮೌಲ್ಯವೆಷ್ಟು? ಚರಾಸ್ತಿಯ ಒಟ್ಟು ಮೌಲ್ಯವೇ 2.12 ಕೋಟಿ ರೂ.,*

*ಶಿವಮೊಗ್ಗ ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾ ಮೇಲೆ ಆದಾಯ ಮೀರಿ ಕೋಟಿ ಕೋಟಿ ಆಸ್ತಿ ಪತ್ತೆ*

*ನಗದು ಎಷ್ಟಿತ್ತು? ಚಿನ್ನಾಭರಣವೆಷ್ಟಿತ್ತು? ಇದ್ದ ವಾಹನಗಳ ಮೌಲ್ಯವೆಷ್ಟು? ಚರಾಸ್ತಿಯ ಒಟ್ಟು ಮೌಲ್ಯವೇ 2.12 ಕೋಟಿ ರೂ.,*

ಏ.7 ರ ಮಂಗಳವಾರ ಬೆಳ್ಳಂ ಬೆಳಿಗ್ಗೆಯೇ ಲೋಕಾಯುಕ್ತ ಪೊಲೀಸರು ಶಿವಮೊಗ್ಗ ಜಿಲ್ಲಾ ಬಿಸಿಎಂ ಅಧಿಕಾರಿ ಶೋಭಾ ಮನೆ, ಕಚೇರಿ ಸೇರಿದಂತೆ ವಿವಿಧ ಕಡೆ ದಾಳಿ ನಡೆಸಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಕಾರಣ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

3.38ಕೋಟಿ ರೂ., ಮೌಲ್ಯದ ಆಸ್ತಿ ಆದಾಯಕ್ಕೂ ಮೀರಿದ್ದೆಂದು ತಿಳಿದುಬಂದಿದ್ದು, ಶೋಭಾ ಬಳಿ ವಾಸದ ಮನೆ, ಎರಡು ನಿವೇಶನ, 4.08 ಎಕರೆ ಕೃಷಿ ಜಮೀನು ಪತ್ತೆಯಾಗಿದ್ದು, ಇವುಗಳ ಮೌಲ್ಯವೇ 1,76,38,000₹ ಎಂದು ಲೋಕಾಯುಕ್ತ ಪೊಲೀಸರು ಅಂದಾಜಿಸಿದ್ದಾರೆ.

ಉಳಿದಂತೆ, ಚರಾಸ್ತಿಯ ಮೌಲ್ಯ 2,12,44,935₹ ಗಳಾಗಿದ್ದು, 1,23,20,000₹ ಮೌಲ್ಯದ ವಾಹನಗಳು, 1,63,500₹ ಮೌಲ್ಯದ ನಗದು, 57,40,000ಮೌಲ್ಯದ ಚಿನ್ನಾಭರಣ ಈವರೆಗೆ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.