*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಇನ್ನು ಮೇಲೆ ಎಸ್.ಬಂಗಾರಪ್ಪ ಬಡಾವಣೆ* ಸರ್ಕಾರದಿಂದ ಅನುಮೋದನೆ

*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಇನ್ನು ಮೇಲೆ ಎಸ್.ಬಂಗಾರಪ್ಪ ಬಡಾವಣೆ*

ಸರ್ಕಾರದಿಂದ ಅನುಮೋದನೆ

ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಡಾವಣೆ ಎಂದು ನಾಮಕಾರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು 2025ರ ಮೇ 22 ರಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್. ಬಂಗಾರಪ್ಪರ ಹೆಸರಿಡಬೇಕೆಂದು ವಿನಂತಿಸಿತ್ತು.

ಈ ಪತ್ರದ ಆಧಾರದ ಮೇಲೆ ಸರ್ಕಾರ ಈ ಅನುಮೋದನೆ ನೀಡಿದೆ.