ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನೀನೂ ದೈವದಂತೆ-
ಸಿಗಲಿಲ್ಲ…

ಹಾಗೆಂದು ಪ್ರಾರ್ಥನೆ
ನಿಲ್ಲಿಸಲಾದೀತೇ?

2.
ಕತ್ತಲನ್ನು ಸರಿಸುತ್ತಾ
ಜೀವನ ಕಳೆಯುವೆ
ಏಕೆ?

ದೀಪ ಹಚ್ಚಿಬಿಡು
ಸಾಕು!

3.
ಮತ್ತೊಬ್ಬರನ್ನು
ಕೆಳಕ್ಕೆ ತಳ್ಳಿ
ನೀನೆಷ್ಟು ಎತ್ತರಕ್ಕೇರುವೆ?

ಸ್ವಂತದೆತ್ತರ
ಕಂಡು ಹಿಡಿಯೋಣ!

4.
ಮಿತ್ರರನ್ನು ಪರೀಕ್ಷಿಸಿ
ನೋಡು…

ಶತೃಗಳನ್ನು
ಪ್ರೀತಿಸಲಾರಂಭಿಸುವೆ!

5.
ಉರಿಯುತ್ತಿದ್ದೆ ನೀನಲ್ಲಿ;

ಹೊಗೆ ಇತ್ತ ಕಡೆಯೂ
ಕಮ್ಮಿ ಏನಿರಲಿಲ್ಲ…

ಚಿಂತೆ ನಿನಗಿತ್ತಲ್ಲಿ;
ಮಗ್ಗುಲು ಬದಲಾಯಿಸುತ್ತಿದ್ದೆ
ನಾನಿಲ್ಲಿ!

– *ಶಿ.ಜು.ಪಾಶ*
8050112067
(10/4/2026)