*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ*

*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;*

*ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ*

ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿ, ಓರ್ವನ ಆತ್ಮಹತ್ಯೆಗೆ ಕಾರಣವಾಗಿದ್ದ ಓರ್ವ ಮಹಿಳೆ ಮತ್ತು ಓರ್ವ ಪುರುಷನಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಸಜೆ, 2 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದೆ.

ಭದ್ರಾವತಿ ಬಂಡಾರಹಳ್ಳಿ ಗ್ರಾಮದ ಮಹದೇವ(56) ಮತ್ತು ಯಶೋಧ(48) ಶಿಕ್ಷೆಗೊಳಗಾದವರು.

ಹತ್ತು ವರ್ಷಗಳ ಹಿಂದೆ ರಾಮಚಂದ್ರರವರು ಮಗಳ ಮದುವೆಗೆ ಮಹದೇವ ಮತ್ತು ಯಶೋಧರಿಂದ ಕೈಸಾಲವಾಗಿ ಹಣ ಪಡೆದಿದ್ದರು.

ಹಣವನ್ನು ಬಡ್ಡಿ ಸಮೇತ ನೀಡದಿದ್ದಾಗ ಬಂಡಾರಹಳ್ಳಿಯಲ್ಲಿರುವ ಮನೆ ಬರೆದುಕೊಡಲು ಒತ್ತಾಯಿಸಿ, ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ್ದರು.

ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಏ.9ರಂದು ಆರೋಪಿಗಳಿಗೆ ಕಲಂ 306 ಸಹಿತ 34 IPC ಕಾಯ್ದೆಗೆ 10 ವರ್ಷ ಕಠಿಣ ಕಾರಾವಾಸ ಮತ್ತು 2 ಲಕ್ಷ ರೂ.,ದಂಡ, ಮೃತ ರಾಮಚಂದ್ರರವರ ಹೆಂಡತಿಗೆ ಪರಿಹಾರವಾಗಿ 1 ಲಕ್ಷ ರೂ., ನೀಡಲು ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಶ್ರೀಮತಿ ರತ್ನಮ್ಮ ಪಿ. ವಾದಿಸಿದ್ದರು.