*ಡ್ರೋಣ್ ಹಾರುತ್ತಿದೆ ನೋಡಿದಿರಾ…* *ಜೂಜಾಡುತ್ತಿದ್ದ 19 ಜನರ ಮೇಲೆ ಕೇಸು ಜಡಿದ ಪೊಲೀಸರು* *ಎಸ್ ಪಿ ನಿಖಿಲ್ ರವರ ಡ್ರೋಣ್ ಸಮರ ಆರಂಭ…*

*ಡ್ರೋಣ್ ಹಾರುತ್ತಿದೆ ನೋಡಿದಿರಾ…*

*ಜೂಜಾಡುತ್ತಿದ್ದ 19 ಜನರ ಮೇಲೆ ಕೇಸು ಜಡಿದ ಪೊಲೀಸರು*

*ಎಸ್ ಪಿ ನಿಖಿಲ್ ರವರ ಡ್ರೋಣ್ ಸಮರ ಆರಂಭ…*

ಶಿವಮೊಗ್ಗ ಜಿಲ್ಲಾ ಎಸ್ ಪಿ ನಿಖಿಲ್ ಬಿ.ರವರು ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಡ್ರೋಣ್ ಸಮರ ಸಾರಿದ್ದಾರೆ.

ಮಲೆನಾಡು ಎಕ್ಸ್ ಪ್ರೆಸ್- ಬೆಂಕಿ ಬಿರುಗಾಳಿ ಪತ್ರಿಕೆಗಳ ಮೂಲಕ ಹೊಳೆ ಹೊನ್ನೂರು, ಭದ್ರಾವತಿ ಗ್ರಾಮಾಂತರ ಭಾಗಗಳಲ್ಲಿ ಅಕ್ರಮ ಮರಳು, ಓಸಿ, ತೂರುಬಿಲ್ಲೆ ವಿಪರೀತವಾಗುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳುವ ಬಗ್ಗೆ ವರದಿ ಮಾಡಲಾಗಿತ್ತು.

ಡ್ರೋಣ್ ಈಗ ಭದ್ರಾವತಿ ಗ್ರಾಮಾಂತರದ ಕೂಡ್ಲಿಗೆರೆ ಗ್ರಾಮದ ಸುತ್ತಮುತ್ತ, ಅಲ್ಲಿನ ಅರಣ್ಯ ಪ್ರದೇಶದ ಚಾನಲ್ ಏರಿ ಬಳಿಯಲ್ಲಿ ಗುಂಪು ಕಟ್ಟಿಕೊಂಡು ಜೂಜಾಟದಲ್ಲಿ ತೊಡಗಿಕೊಂಡಾಗ ಹಾರಿಸಲಾಗಿತ್ತು.

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ನೇತೃತ್ವದ ಸಿಬ್ಬಂದಿಗಳ ತಂಡ ಈ ಸ್ಥಳದ ಮೇಲೆ ದಾಳಿ ಮಾಡಿತ್ತು.

ಒಟ್ಟು 19 ಜನ ಅಕ್ರಮ ಜೂಜುಕೋರರನ್ನು ಡ್ರೋಣ್ ಮೂಲಕ ಗುರುತಿಸಿ ಪ್ರಕರಣ ದಾಖಲಿಸಲಾಗಿದೆ.