ಕವಿಸಾಲು

*ಮೈ ಬೆವರಿನ ಸರದಾರ ಕಾರ್ಮಿಕನ ದಿನಾಚರಣೆ ಇವತ್ತು…ನಿಮಗೂ ಶುಭಾಶಯಗಳು…*

Gm ಶುಭೋದಯ💐💐

*ಕವಿಸಾಲು*

1.
ಸಂಬಂಧಗಳು
ಕೊನೆಗೊಳ್ಳುವುದಿಲ್ಲ
ಯಾವತ್ತಿಗೂ…

ಜನ
ನಿಭಾಯಿಸುವುದು
ನಿಲ್ಲಿಸಿಬಿಡುತ್ತಾರಷ್ಟೇ!

2.
ನಿನ್ನೊಳ್ಳೆಯ ಸಮಯ
ಮೀಸಲಿಡು ಅವರಿಗಾಗಿ…

ನಿನ್ನ ಕೆಟ್ಟ ಕಾಲದಲ್ಲಿ
ಸಾಥ್ ಕೊಟ್ಟವರಿಗಾಗಿ!

3.
ಮೆಲ್ಲ ಮೆಲ್ಲಗೆ
ಜಗತ್ತನ್ನು ಅರ್ಥಮಾಡಿಕೊಂಡೆ ನಾನು…

ಮೊದಲೆಲ್ಲ
ಆಣೆ ಮಾಡುವ ಜನರನ್ನೆಲ್ಲ ನಂಬಿಬಿಡುತ್ತಿದ್ದೆ!

– *ಶಿ.ಜು.ಪಾಶ*
8050112067
(1/5/2026)