*ಚಾಕು ಹಾಕಿ ಕೊಲೆಗೆ ಯತ್ನ;* *ಅವನಿಗೆ 8 ವರ್ಷ- ಆಕೆಗೆ 2 ವರ್ಷ ಕಠಿಣ ಸಜೆ*

*ಚಾಕು ಹಾಕಿ ಕೊಲೆಗೆ ಯತ್ನ;*

*ಅವನಿಗೆ 8 ವರ್ಷ- ಆಕೆಗೆ 2 ವರ್ಷ ಕಠಿಣ ಸಜೆ*

ಆಸ್ತಿ ವಿಚಾರದಲ್ಲಿ ನಡೆದ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರವಿನಾಯ್ಕ(32) ಮತ್ತು ಲಕ್ಷ್ಮೀಬಾಯಿ(40) ರವರಿಗೆ 8 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 2 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದ್ದಾರೆ.

ಭದ್ರಾವತಿ ಕೊಮರನಹಳ್ಳಿ ತಾಂಡದ ವಾಸಿ ರವಿನಾಯ್ಕ, ರಾಜನಾಯ್ಕ ಮತ್ತು ಲಕ್ಷ್ಮೀಬಾಯಿ ಆಸ್ತಿ ವಿಚಾರದಲ್ಲಿ ಶರತ್, ಸುರೇಂದ್ರ, ವಿನಯ್ ಕುಮಾರ್, ಜಯಬಾಯಿ, ಸರೋಜಬಾಯಿ ರವರಿಗೆ ಅವಾಚ್ಯವಾಗಿ ಬೈದು ಕೊಲೆ ಮಾಡುವ ಉದ್ದೇಶದಿಂದ ಶರತ್ ಗೆ ಚಾಕುವಿನಿಂದ ಎರಡ್ಮೂರು ಬಾರಿ ಇರಿದಿದ್ದರು.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿ ನಿವೃತ್ತ ಎಎಸ್ ಐ ಕೆ.ಕೆ.ತ್ಯಾಗರಾಜ್ ಆರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಮೊದಲ ಆರೋಪಿ ರವಿನಾಯ್ಕನಿಗೆ 8 ವರ್ಷ ಕಠಿಣ ಜೈಲು, 2 ಲಕ್ಷ ರೂ., ದಂಡ, ಮೂರನೇ ಆರೋಪಿ ಲಕ್ಷ್ಮೀಬಾಯಿಗೆ 2 ವರ್ಷ ಕಠಿಣ ಜೈಲು, 20 ಸಾವಿರ ರೂ.,ದಂಡ ವಿಧಿಸಿದ್ದು, ನೊಂದಿರುವ ಶರತ್ ಕುಮಾರ್ ರವರಿಗೆ 2 ಲಕ್ಷ ರೂ., ಪರಿಹಾರ ನೀಡಲು ಆದೇಶಿಸಿದ್ದಾರೆ.