ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಈ ಜಗತ್ತು
ಎಷ್ಟು
ಸುಂದರವಾಗಿದ್ದರೇನಂತೆ…

ನಿನ್ನ ನೋಡಿದಾಗಲಷ್ಟೇ
ನೆಮ್ಮದಿಯು!

2.
ಯಾರು ಅತ್ತಿದ್ದಾರೆ
ವೇಶ್ಯೆಯ
ಸಮಾಧಿ ಬಳಿ ಹೋಗಿ?

ಸಂಬಂಧವೇನಿದ್ದರೂ
ಬದುಕಿರುವವರೆಗಷ್ಟೇ!

3.
ಕಾಲ
ಕಳೆದುಹೋಗುವುದಿಲ್ಲ;
ಕಳೆದು ಹೋಗುವುದು
ನಾನು- ನೀನಷ್ಟೇ!

– *ಶಿ.ಜು.ಪಾಶ*
8050112067
(19/5/2026)