*ಯುವತಿ ಬಂಗಾರದ ಸರ ಅಪಹರಿಸಲು ಇಕೋ ಸ್ಪೋರ್ಟ್ಸ್ ಕಾರಲ್ಲಿ ಬಂದಿದ್ದ ಕಳ್ಳ* *ಮಂಜುನಾಥ ನಾಯ್ಕನನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…*

*ಯುವತಿ ಬಂಗಾರದ ಸರ ಅಪಹರಿಸಲು ಇಕೋ ಸ್ಪೋರ್ಟ್ಸ್ ಕಾರಲ್ಲಿ ಬಂದಿದ್ದ ಕಳ್ಳ*

*ಮಂಜುನಾಥ ನಾಯ್ಕನನ್ನು ಬಂಧಿಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…*

ಕಾರಿನಿಂದ ಇಳಿಯುತ್ತಿದ್ದ ಯುವತಿಯ ಕೊರಳಲ್ಲಿದ್ದ ಬಂಗಾರದ ಸರವನ್ನು ಹಿಂದಿನಿಂದ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದ ಇಬ್ಬರು ಅಪಹರಿಸಿದ್ದ ಘಟನೆಗೆ ಸಂಬಂಧಿಸಿದಂತೆ ಮಂಜುನಾಥ ನಾಯ್ಕನನ್ನು ಬಂಧಿಸಲಾಗಿದೆ.

ಮೇ‌22 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಲಗೆರೆ ಬಳಿ ಈ ಘಟನೆ ನಡೆದಿತ್ತು.

*ಪೊಲೀಸ್ ಪ್ರಕಟಣೆ ಏನು ಹೇಳುತ್ತೆ?;*

ದಿನಾಂಕ::-22-05-2026 ರಂದು ಸಂಜೆ *ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಲಗೆರೆಯಿಂದ* ಸ್ವಲ್ಪ ಮುಂದೆ *ಯುವತಿಯೊಬ್ಬರು ಕಾರಿನಿಂದ ಕೆಳಗೆ ಇಳಿಯುತ್ತಿರುವಾಗ ಹಿಂಭಾಗದಿಂದ ಇಕೋ ಸ್ಪೋರ್ಟ್ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು* ಯುವತಿಯ *ಕೊರಳಿನಲ್ಲಿದ್ದ ಬಂಗಾರದ ಚೈನ್ ಅನ್ನು ಕಿತ್ತುಕೊಂಡು ಪರಾರಿಯಾದ* ಬಗ್ಗೆ ಠಾಣಾ ಗುನ್ನೆ ಸಂಖ್ಯೆ 176/2025 ಕಲಂ: 309(4) ಬಿಎನ್ಎಸ್ ರೀತ್ಯಾ ರೀತ್ಯಾ *ಸರಗಳ್ಳತನ ಪ್ರಕರಣ* ದಾಖಲಾಗಿರುತ್ತೆ.

ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆ ಬಗ್ಗೆ * ನಿಖಿಲ್ ಬಿ. ಐ.ಪಿ.ಎಸ್.* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ , ಕಾರಿಯಪ್ಪ. ಎ.ಜಿ* ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಸಂಜೀವ್ ಕುಮಾರ್ ಟಿ* ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ *ರಾಘವೇಂದ್ರ ಕಾಂಡಿಕೆ ಹಾಗೂ ಪಿ.ಎಸ್.ಐ ನವೀನ್ ಮಠಪತಿ* & *ಸಿಬ್ಬಂದಿಯವರಾದ, ಸಿಪಿಸಿ ಶ್ರೀಕಾಂತ್, ಕಾಶಿನಾಥ, ಕವನ* ರವರನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ *ಆರೋಪಿ ಮಂಜುನಾಥನಾಯ್ಕ ಈತನನ್ನು ದಸ್ತಗಿರಿ* ಮಾಡಿ, *ಕೃತ್ಯಕ್ಕೆ ಉಪಯೋಗಿಸಿದ 5,00,000/- ಮೌಲ್ಯದ ಕಾರು, ಹಾಗೂ ಸುಮಾರು 150,000/-ರೂ ಬೆಲೆಬಾಳುವ 10 ಗ್ರಾಂ ತೂಕದ ಬಂಗಾರದ ಸರವನ್ನು* ಅಮಾನತ್ತುಪಡಿಸಿಕೊಂಡು, *ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.*

ಈ ಪತ್ತೆ ಕಾರ್ಯವನ್ನು ಶಿವಮೊಗ್ಗ ಜಿಲ್ಲೆಯ *ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ನಿಖಿಲ್ ಬಿ. ಐ.ಪಿ.ಎಸ್ ರವರು ಶ್ಲಾಘೀಸಿರುತ್ತಾರೆ.*