*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಗೋಪಾಳದ ಭರತ್- ಆದಿಲ್ ಬಂಧನ* *ವಿನೋಬನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ*

*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಗೋಪಾಳದ ಭರತ್- ಆದಿಲ್ ಬಂಧನ*

*ವಿನೋಬನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ*

ಬೈಕ್ ನಲ್ಲಿ ಬಂದು ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಅಪಹರಿಸಿದ್ದ ಶಿವಮೊಗ್ಗ ಗೋಪಾಳ ಚಾಲುಕ್ಯ ನಗರದ ಭರತ್(21) ಮತ್ತು ಮೇಲಿನ ತುಂಗಾನಗರದ ಮೊಹಮ್ಮದ್ ಆಬೀದ್(19)ನನ್ನು ವಿನೋಬನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕಳೆದ ಮೇ 13ರಂದು ಸೂರ್ಯ ಬಡಾವಣೆಯಲ್ಲಿ ವಾಕಿಂಗಿಗೆ ಹೋಗಿದ್ದಾಗ ಅಪರಿಚಿತರಿಬ್ಬರು ಬೈಕಿನಲ್ಲಿ ಬಂದು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸರ 7 ಗ್ರಾಂ ತೂಕದ, ಒಂದು ಲಕ್ಷ ರೂ., ಮೌಲ್ಯದ್ದಾಗಿತ್ತು. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ ಪಿ ನಿಖಿಲ್ ತಂಡವೊಂದನ್ನು ರಚಿಸಿದ್ದು, ಡಿವೈಎಸ್ ಪಿ ಟಿ. ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಡಿ.ಕೆ.ಸಂತೋಷ್ ಕುಮಾರ್ ಉಸ್ತುವಾರಿಯಲ್ಲಿ ಪಿಎಸ್ ಐ ತಿರುಮಲೇಶ್ ಮತ್ತು ಸಿಬ್ಬಂದಿಗಳಾದ ಕೆ.ಆರ್.ರಾಜು, ಬಿ.ಚಂದ್ರಾನಾಯ್ಕ, ಎಸ್.ಜಿ.ಮಲ್ಲಪ್ಪ, ಎನ್.ಕೆ.ಅರುಣ್ ಕುಮಾರ್, ಮನುಶಂಕರ್ ರವನ್ನೊಳಗೊಂಡ ತಂಡದಲ್ಲಿದ್ದರು.

ಸರದ ಜೊತೆ ಕೃತ್ಯಕ್ಕೆ ಬಳಸಿದ್ದ ವಾಹನವನ್ನೂ ವಶಕ್ಕೆ ಪಡೆಯಲಾಗಿದೆ. ಎಸ್.ಪಿ.ನಿಖಿಲ್ ಇಡೀ ತಂಡವನ್ನು ಅಭಿನಂದಿಸಿದ್ದಾರೆ.