*ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಲಿದ್ದಾರಾ ಶ್ರೀಮತಿ ಬಲ್ಕೀಸ್ ಬಾನು?*
*ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಲಿದ್ದಾರಾ ಶ್ರೀಮತಿ ಬಲ್ಕೀಸ್ ಬಾನು?*
ಹೀಗೊಂದು ವಿಶೇಷ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಓಡಾಡತೊಡಗಿದೆ.
ಜೆ.ಹೆಚ್.ಪಟೇಲರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಉತ್ತಮ ಆಡಳಿತ ನಿರ್ವಹಿಸಿದ್ದ, ಕಾಂಗ್ರೆಸ್ ಪಕ್ಷ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಯಾರೂ ಅಂದಾಜಿಸದ ರೀತಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರೂ ಆಗಿಹೋದ ಶ್ರೀಮತಿ ಬಲ್ಕೀಸ್ ಬಾನುರವರಿಗೆ ಹೊಸ ಸರ್ಕಾರದಲ್ಲಿ ಮಂತ್ರಿಪಟ್ಟ ಸಿಗುವ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪರವರ ಶಿಷ್ಯೆಯೂ ಆಗಿರುವ ಬಲ್ಕೀಸ್ ಬಾನು ತಮ್ಮ ವಿಶೇಷ ಪ್ರಯತ್ನದ ಮೂಲಕ ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಹಾಗೂ ಮುಖ್ಯ ರಸ್ತೆಯೊಂದಕ್ಕೆ ಬಂಗಾರಪ್ಪ ಹೆಸರಿಡಿಸುವಲ್ಲಿ ಶ್ರಮಪಟ್ಟಿದ್ದು ಬಹಳ ಜನರಿಗೆ ಗೊತ್ತೇ ಇಲ್ಲ.
ಇಂಥ ಹತ್ತುಹಲವು ಸಾಧನೆಗಳ ವ್ಯಕ್ತಿತ್ವ ಹೊಂದಿರುವ ಬಲ್ಕೀಸ್ ಬಾನುರವರ ಹೆಸರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂತ್ರಿಗಿರಿ ವಿಚಾರದಲ್ಲಿ ಚರ್ಚೆಯಾಗುತ್ತಿರುವುದು ಸದ್ಯದ ಬಿಸಿಬಿಸಿ ಸುದ್ದಿ…


