*ಅಮೇರಿಕಾ ಪ್ರವಾಸಕ್ಕೆ ಹೊರಟ ಪತ್ರಕರ್ತ ಪದ್ಮನಾಭ್;* *ಶುಭ ಹಾರೈಸಿದ ಚೀಟಿ ಚಾ ಗೆಳೆಯರು*

*ಅಮೇರಿಕಾ ಪ್ರವಾಸಕ್ಕೆ ಹೊರಟ ಪತ್ರಕರ್ತ ಪದ್ಮನಾಭ್;*

*ಶುಭ ಹಾರೈಸಿದ ಚೀಟಿ ಚಾ ಗೆಳೆಯರು*

ಶಿವಮೊಗ್ಗದ ಹಿರಿಯ ಪತ್ರಕರ್ತ, ಛಲದಂಕಮಲ್ಲ ದಿನಪತ್ರಿಕೆ ಸಂಪಾದಕರೂ ಆದ ಜಿ. ಪದ್ಮನಾಭ್ ಹಾಗೂ ಜ್ಯೋತಿ ಪದ್ಮನಾಭ್ ಅವರುಗಳ ಅಮೇರಿಕಾ ಪ್ರವಾಸಕ್ಕೆ ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದ ಚೀಟಿ ಚಹಾಕೂಟದ ಗೆಳೆಯರ ಬಳಗ ಇಂದು ಬೆಳಿಗ್ಗೆ ಶುಭಹಾರೈಸಿ ಪದ್ಮನಾಭ್ ಅವರಿಗೆ ಸನ್ಮಾನಿಸಿತು.

ಈ ಸಂದರ್ಭದಲ್ಲಿ ತುಂಗಾತರಂಗ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ, ಬೆಂಕಿಬಿರುಗಾಳಿ ಸಂಪಾದಕ ಶಿ.ಜು. ಪಾಶಾ, ಶಿವಮೊಗ್ಗ ಸಿಂಹ ಸಂಪಾದಕ ಜಿ. ಚಂದ್ರಶೇಖರ್, ಪತ್ರಕರ್ತರಾದ ಆರುಂಡಿ ಶ್ರೀನಿವಾಸ್, ಕೆ. ನಾಗರಾಜ್, ಎಪಿಎಂಸಿ ಅಧಿಕಾರಿ ಸಾಮ್ಯಾನಾಯ್ಕ್, ವಿನಯ್ ಟೀ ಸ್ಟಾಲ್ ನ ಎನ್. ವಿನಯ್, ಹಿರಿಯರಾದ ಬಿ.ಟಿ. ನಾಗರಾಜ್, ದಯಾನಂದ್, ಜಯಣ್ಣ, ಚಿದಂಬರಂ, ಬಿ.ಟಿ. ರಾಜು, ಎಸ್. ರಮೇಶ್, ದಯಾನಂದ್ ಪೈ ಹಾಗೂ ಇತರರಿದ್ದರು.