ಕವಿಸಾಲು

*ಕವಿಸಾಲು*
(16/06/2026)

1.
ಎಲ್ಲರ
ಜೀವನದ
ಪ್ರಶ್ನೆಪತ್ರಿಕೆ
ಬೇರೆ ಬೇರೆಯೇ…

ಹಾಗಾಗಿ
ನಕಲು ಮಾಡದಿರಿ!

2.
ಹಣದಲ್ಲಿ;

ಭೂಮಿಗಿಂತ ಹೆಚ್ಚೇ
ಗುರುತ್ವಾಕರ್ಷಣ ಶಕ್ತಿಯಿದೆಯಲ್ಲ ಹೃದಯವೇ…

ಜೊತೆಗೆ
ಅಪ್ಸರೆಗಿಂತ ಹೆಚ್ಚೇ
ಸೌಂದರ್ಯವೂ!

3.
ಹೃದಯ ಎಂಬುದು
ಮಸಣವು…

ಇಲ್ಲೋ;
ಕೋಟಿ ಕೋಟಿ
ಸಮಾಧಿಗಳಲ್ಲಿ ಕನಸುಗಳು!

– *ಶಿ.ಜು.ಪಾಶ*
8050112067