*ಶಿವಮೊಗ್ಗದ ಮಲ್ಲಿಗೇನಹಳ್ಳಿ- ಶ್ರೀರಾಂಪುರ- ವಾಜಪೇಯಿ ಬಡಾವಣೆಗಳ ಹಗಲು ಮನೆಗಳ್ಳನನ್ನು ಬೇಟೆಯಾಡಿದ ತುಂಗಾನಗರದ ಸಿಪಿಐ ಗುರುರಾಜ್ ನೇತೃತ್ವದ ತಂಡ* *6 ಪ್ರಕರಣ- 6 ಲಕ್ಷ ಮೌಲ್ಯದ ಚಿನ್ನ ವಶ*

*ಶಿವಮೊಗ್ಗದ ಮಲ್ಲಿಗೇನಹಳ್ಳಿ- ಶ್ರೀರಾಂಪುರ- ವಾಜಪೇಯಿ ಬಡಾವಣೆಗಳ ಹಗಲು ಮನೆಗಳ್ಳನನ್ನು ಬೇಟೆಯಾಡಿದ ತುಂಗಾನಗರದ ಸಿಪಿಐ ಗುರುರಾಜ್ ನೇತೃತ್ವದ ತಂಡ*

*6 ಪ್ರಕರಣ- 6 ಲಕ್ಷ ಮೌಲ್ಯದ ಚಿನ್ನ ವಶ*

ಹಗಲು ಮನೆಗಳ್ಳತನ ಮಾಡುತ್ತಿದ್ದ ಶಿವಮೊಗ್ಗದ ಶ್ರೀರಾಂಪುರದಲ್ಲಿ ವಾಸವಿದ್ದ ಕಳ್ಳನೊಬ್ಬನನ್ನು ತುಂಗಾನಗರ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ತಂಡ ಸೆರೆ ಹಿಡಿದಿದೆ.

ತುಂಗಾನಗರ ಠಾಣಾ ವ್ಯಾಪ್ತಿಯ ಮಲ್ಲಿಗೇನಹಳ್ಳಿ, ಶ್ರೀರಾಂಪುರ, ವಾಜಪೇಯಿ ಬಡಾವಣೆಗಳಲ್ಲಿ ಹಗಲು ಹೊತ್ತೇ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಶ್ರೀರಾಂಪುರದ ಚಾಲಕ ವೃತ್ತಿಯ ಬಿ.ಪ್ರದೀಪ್(33) ನನ್ನು ಬಂಧಿಸಿರುವ ಪೊಲೀಸರು, 6 ಕಳ್ಳತನ ಪ್ರಕರಣಗಳಲ್ಲಿ ಸುಮಾರು 6 ಲಕ್ಷ ರೂ.,ಗಳ ಮೌಲ್ಯದ ಬಂಗಾರದ ಆಭರಣಗಳನ್ನು, 25 ಸಾವಿರ ರೂ.,ಮೌಲ್ಯದ ಬೈಕೊಂದನ್ನು ವಶಕ್ಕೆ ಪಡೆದಿದ್ದಾರೆ.

ಎಸ್ ಪಿ ಬಿ.ನಿಖಿಲ್, ಅಡಿಷನಲ್ ಎಸ್ ಪಿ ಎ.ಜಿ.ಕಾರಿಯಪ್ಪ, ಶಿವಮೊಗ್ಗ ಎ ವಿಭಾಗದ ಡಿವೈಎಸ್ ಪಿ ಶೀಲವಂತ ಹೊಸಮನಿ ಮಾರ್ಗದರ್ಶನದಲ್ಲಿ ಸಿಪಿಐ ಕೆ.ಟಿ.ಗುರುರಾಜ್, ಪಿಎಸ್ ಐ ಎಂ.ರಘುವೀರ, ಶ್ರೀಮತಿ ಮಂಜಮ್ಮ ನೇತೃತ್ವದಲ್ಲಿ ಹೆಚ್ ಸಿ ಕಿರಣ್ ಮೋರೆ, ಅರುಣ್ ಕುಮಾರ್, ಸಿಪಿಸಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ ನಾಯ್ಕ, ಹರೀಶ್ ಎಂ ಜಿ, ರಂಗನಾಥ್, ತಮ್ಮಣ್ಣ ಜಂಬರಗಿ ತಂಡ ಈ ಸಾಧನೆ ಮಾಡಿದೆ.