*ಮಹಿಷಿಯ ಮಠದಲ್ಲಿ ಬಂಗಾರದ ಹಲಗಾರತಿಗಳನ್ನು ಕದ್ದಿದ್ದ ಶಿವಮೊಗ್ಗದ ರಾಘವೇಂದ್ರ ಆಚಾರ್ಯ ಅರೆಸ್ಟ್* *ಸಿಪಿಐ ಇಮ್ರಾನ್ ಬೇಗ್- ರಾಜಶೇಖರ ನೇತೃತ್ವದ ತಂಡದಿಂದ ಕಳ್ಳನ ಬೇಟೆ* *ಕದ್ದ ದಿನವೇ ಸಿಕ್ಕಿಬಿದ್ದ ಕಳ್ಳ*
*ಮಹಿಷಿಯ ಮಠದಲ್ಲಿ ಬಂಗಾರದ ಹಲಗಾರತಿಗಳನ್ನು ಕದ್ದಿದ್ದ ಶಿವಮೊಗ್ಗದ ರಾಘವೇಂದ್ರ ಆಚಾರ್ಯ ಅರೆಸ್ಟ್*
*ಸಿಪಿಐ ಇಮ್ರಾನ್ ಬೇಗ್- ರಾಜಶೇಖರ ನೇತೃತ್ವದ ತಂಡದಿಂದ ಕಳ್ಳನ ಬೇಟೆ*
*ಕದ್ದ ದಿನವೇ ಸಿಕ್ಕಿಬಿದ್ದ ಕಳ್ಳ*
ಮಹಿಷಿ ಗ್ರಾಮದ ಶ್ರೀ ಸತ್ಯಸಂಧಗುರು ಉತ್ತರಾದಿ ಮಠದಲ್ಲಿ ಬಂಗಾರ ಕದ್ದಿದ್ದ ಶಿವಮೊಗ್ಗದ ಗಾಂಧಿ ನಗರ ನಿವಾಸಿ ರಾಘವೇಂದ್ರ ಆಚಾರ್ಯ(25)ನನ್ನು ತೀರ್ಥಹಳ್ಳಿ ಯ ಮಾಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ರಾಘವೇಂದ್ರ ಆಚಾರ್ಯನಿಂದ ದೇವಸ್ಥಾನಕ್ಕೆ ಸಂಬಂಧಿಸಿದ ಸುಮಾರು 780 ಗ್ರಾಂ ಬಂಗಾರದ 16 ಹಲಗಾರತಿ(ಮೌಲ್ಯ- 1,01,40,000₹)ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಳೆದ ಜೂ.17 ರಂದು ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಡಿವೈಎಸ್ ಪಿ ಅರವಿಂದ ಕಲಗುಂಜಿ ಸೂಚನೆಯಂತೆ ತೀರ್ಥಹಳ್ಳಿ ಸಿಪಿಐ ಇಮ್ರಾನ್ ಬೇಗ್, ಮಾಳೂರು ಸಿಪಿಐ ರಾಜಶೇಖರ, ಸಬ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್, ಸಿಬ್ಬಂದಿಗಳಾದ ಲಿಂಗೇಗೌಡ, ಸುರಕ್ಷಿತ್, ಕುಮಾರ್, ರವಿ,ಸುರೇಶ್ ನಾಯ್ಕ, ಸಂತೋಷ್, ವಿನಯ್ ಕುಮಾರ್ ರವರಿದ್ದ ತಂಡ ಕಳ್ಳನನ್ನು ಹಿಡಿದಿದೆ.
ಕಳ್ಳತನವಾದ 24 ಗಂಟೆಯೊಳಗೇ ಕಳ್ಳನನ್ನು ಬಂಧಿಸಲಾಗಿದೆ.


