ವಿನೋಬ ನಗರದ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರ ದಾಳಿ; ಹೊಸಮನೆಯ ಶೇಖರ್ ಮೂರ್ತಿ ಬಂಧನ
ವಿನೋಬ ನಗರದ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಪೊಲೀಸರ ದಾಳಿ;
ಹೊಸಮನೆಯ ಶೇಖರ್ ಮೂರ್ತಿ ಬಂಧನ
ಶಿವಮೊಗ್ಗದ ವಿನೋಬ ನಗರದ ವಾಸದ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಿದ ಪೊಲೀಸರು, ಓರ್ವ ದಂಧಕೋರನನ್ನು ಬಂಧಿಸಿದ್ದು, ಓರ್ವ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ವಿನೋಬನಗರ ಸಿಪಿಐ ಚಂದ್ರಕಲಾ ನೇತೃತ್ವದ ಪೊಲೀಸರ ತಂಡ ಈ ದಾಳಿ ಮಾಡಿದ್ದು, ಶಿವಮೊಗ್ಗದ ಹೊಸಮನೆ ವಾಸಿ ಶೇಖರ್ ಮೂರ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಎಸ್ ಪಿ ಮಿಥುನ್ ಕುಮಾರ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಯಿತು.