*ಶಿವಮೊಗ್ಗದ ಎಂ ಆರ್ ಎಸ್ ಬಸ್ ನಿಲ್ದಾಣ- ಮೃತ್ಯುಗೆ ಆಹ್ವಾನ* *ನೀರು ನಿಂತು ಅವ್ಯವಸ್ಥೆ- ಜೊತೆಗೆ ಅಪಘಾತಗಳೂ ಹೇರಳ* *ಟ್ರಾಫಿಕ್ ಸಿಗ್ನಲ್ ಅಳವಡಿಸಿ; ಸ್ಥಳೀಯರ ಬೇಡಿಕೆ*
*ಶಿವಮೊಗ್ಗದ ಎಂ ಆರ್ ಎಸ್ ಬಸ್ ನಿಲ್ದಾಣ- ಮೃತ್ಯುಗೆ ಆಹ್ವಾನ*
*ನೀರು ನಿಂತು ಅವ್ಯವಸ್ಥೆ- ಜೊತೆಗೆ ಅಪಘಾತಗಳೂ ಹೇರಳ*
*ಟ್ರಾಫಿಕ್ ಸಿಗ್ನಲ್ ಅಳವಡಿಸಿ; ಸ್ಥಳೀಯರ ಬೇಡಿಕೆ*
ಸುತ್ತಮುತ್ತಲಿನ ಮಕ್ಕಳು, ದೊಡ್ಡವರೆನ್ನದೇ ಬಸ್ಸಿಗಾಗಿ ಕಾದು ನಿಲ್ಲುವ ಶಿವಮೊಗ್ಗದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಎಂ ಆರ್ ಎಸ್ ಬಸ್ ನಿಲ್ದಾಣ ಪ್ರಮುಖವಾದುದು.
ಸಹ್ಯಾದ್ರಿ ಕಾಲೇಜು, ಕುವೆಂಪು ವಿವಿ ಕಚೇರಿ ಸೇರಿದಂತೆ ಶಿವಮೊಗ್ಗದತ್ತ ಬರುವ, ಶಿವಮೊಗ್ಗದಿಂದ ಭದ್ರಾವತಿ ಕಡೆಗೋ, ಎನ್ ಆರ್ ಪುರದ ಕಡೆಗೋ, ಬೈಪಾಸಿನ ಕಡೆಗೋ ಹೋಗುವುದಾದರೆ ಈ ಎಂ ಆರ್ ಎಸ್ ವೃತ್ತದಲ್ಲಿರುವ ಬಸ್ ನಿಲ್ದಾಣಗಳನ್ನೇ ಅವಲಂಬಿಸಬೇಕು. ಆದರೆ, ಈ ನಿಲ್ದಾಣಗಳೋ ಮಳೆಗಾಲದಲ್ಲಿ ಬೇರೆಯದೇ ಥರದ ನರಕ ಸೃಷ್ಟಿಸುತ್ತವೆ.
ಬಸ್ ಹತ್ತಲು ಸಾಧ್ಯವಾಗದಂತೆ ಮೊಣಕಾಲುದ್ದ ಮಳೆನೀರು ಇಲ್ಲಿ ನಿಂತಿರುತ್ತದೆ. ಬಸ್ ಈ ಮಳೆನೀರ ಮೇಲೆ ಹರಿದರಂತೂ ಉಟ್ಟ ಬಟ್ಟೆಗಳೆಲ್ಲ ಕೆಸರುಮಯ!
ಜೊತೆಗೆ, ಈ ವೃತ್ತದಲ್ಲಿ ಅತ್ತಲಿಂದಲೂ ಇತ್ತಲಿಂದಲೂ ಎಂಬಂತೆ ನಾಲ್ಕು ದಿಕ್ಕುಗಳಿಂದಲೂ ವಾಹನಗಳ ವೇಗದ ಓಡಾಟ ಬೇರೆ. ರಸ್ತೆದಾಟಬೇಕೆಂದರೆ ಜೀವ ಕೈಯಲ್ಲಿ ಹಿಡಿದೇ ಹೋಗಬೇಕು. ಸುಮ್ಮನೆ ನಿಂತವರೂ ಇಲ್ಲಿ ಅಪಘಾತಕ್ಕೊಳಗಾಗುತ್ತಾರೆ.
ಪೊಲೀಸ್ ಇಲಾಖೆ ಈ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಅನಿವಾರ್ಯತೆ ಇದೆ. ಮಹಾನಗರ ಪಾಲಿಕೆ ಈ ಸರ್ಕಲಲ್ಲಿ ನಿಲ್ಲುವ ನೀರಿಗೆ ಗತಿ ಕಾಣಿಸಬೇಕಿದೆ. ಅಮೂಲ್ಯ ಜೀವಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ.


