ಭದ್ರಾವತಿ ಭೋವಿ ಕಾಲೋನಿ ಅಶೋಕನ ಆತ್ಮಹತ್ಯೆಯ ಕುರಿತ ವೀಡಿಯೋ ವೈರಲ್…* *ಎಎಸ್ ಐ ಮಂಜೇಶ್ವರ್ ತಮ್ಮ ಪಾಪಣ್ಣ, ಕುಳ್ಳಿ ರಾಜೇಶ, ಅಣ್ಣಪ್ಪ, ಧೃವ- ಬಡ್ಡಿ ಮಾಫಿಯಾದ ಭಯಾನಕ ಮುಖ ಬಯಲು* *ಅರೆಸ್ಟ್ ಮಾಡದೇ ಆಟವಾಡುತ್ತಿದೆಯಾ ಪೊಲೀಸ್ ಇಲಾಖೆ?* *ಎಸ್ ಪಿ ನಿಖಿಲ್ ರವರ ಮುಂದೆ ಮತ್ತೊಂದು ಸವಾಲು- ಭದ್ರಾವತಿ ಖಾಕಿಯೊಳಗಿನ ಬಡ್ಡಿ ಮಾಫಿಯಾ ಬಗ್ಗು ಬಡಿಯುವರೇ?*
*ಭದ್ರಾವತಿ ಭೋವಿ ಕಾಲೋನಿ ಅಶೋಕನ ಆತ್ಮಹತ್ಯೆಯ ಕುರಿತ ವೀಡಿಯೋ ವೈರಲ್…*
*ಎಎಸ್ ಐ ಮಂಜೇಶ್ವರ್ ತಮ್ಮ ಪಾಪಣ್ಣ, ಕುಳ್ಳಿ ರಾಜೇಶ, ಅಣ್ಣಪ್ಪ, ಧೃವ- ಬಡ್ಡಿ ಮಾಫಿಯಾದ ಭಯಾನಕ ಮುಖ ಬಯಲು*
*ಅರೆಸ್ಟ್ ಮಾಡದೇ ಆಟವಾಡುತ್ತಿದೆಯಾ ಪೊಲೀಸ್ ಇಲಾಖೆ?*
*ಎಸ್ ಪಿ ನಿಖಿಲ್ ರವರ ಮುಂದೆ ಮತ್ತೊಂದು ಸವಾಲು- ಭದ್ರಾವತಿ ಖಾಕಿಯೊಳಗಿನ ಬಡ್ಡಿ ಮಾಫಿಯಾ ಬಗ್ಗು ಬಡಿಯುವರೇ?*
ಭದ್ರಾವತಿ ಬೋವಿ ಕಾಲೋನಿಯ ವ್ಯಕ್ತಿಯೊಬ್ಬ ಬಡ್ಡಿ ಮಾಫಿಯಾಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಈ ಘಟನೆಯ ಹಿಂದೆ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರ ಸಹೋದರನೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಭದ್ರಾವತಿ ಬೋವಿ ಕಾಲೋನಿಯ ಅಶೋಕ ವಿಷ ಕುಡಿಯುವ ಮುನ್ನ ವೀಡಿಯೋವೊಂದನ್ನು ಮಾಡಿದ್ದು, ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯ ಎಎಸ್ ಐ ಮಂಜೇಶ್ವರ್ ಎಂಬಾತನ ಸಹೋದರ ಪಾಪಣ್ಣನ ಹೆಸರು ಕೂಡ ಪ್ರಸ್ತಾಪವಾಗಿದೆ.
ಕುಳ್ಳಿ ರಾಜೇಶ, ಅಣ್ಣಪ್ಪ, ಧೃವ ಮತ್ತು ಪೊಲೀಸ್ ಮಂಜೇಶ್ವರನ ತಮ್ಮ ಪಾಪಣ್ಣ ಇಸ್ಪೀಟ್ ಆಡುವ ಜಾಗದಲ್ಲಿ ಬಡ್ಡಿಗೆ ಸಾಲ ನೀಡಿದ್ದರು. ಈ ಸಾಲ ವಾಪಸ್ ಕೊಡುತ್ತೇನೆ. ಸಮಯ ಕೊಡಿ ಎಂದರೂ ಕೇಳುತ್ತಿಲ್ಲ. ಜೀವ ಬೆದರಿಕೆ ಹಾಕುತ್ತಿದ್ದು, ಹೊಡೀತೀವಿ, ಸಾಲ ಸಂಜೆಯೊಳಗೆ ವಸೂಲು ಮಾಡ್ತೀವಿ ಎಂದೆಲ್ಲ ಹೆದರಿಸುತ್ತಿದ್ದಾರೆ. ನನಗೂ ಹಣ ಬರುವುದಿದೆ. ಡೊಳ್ಳ ಸೂರಿ ನಂಗೆ ಹಣ ಕೊಡೋದಿದೆ. ನಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅಶೋಕ ಮೊಬೈಲಲ್ಲಿ ಮಾಡಿರೋ ವೀಡಿಯೋ ಇದೀಗ ವೈರಲ್ ಆಗಿದೆ.
ವಿಷ ಕುಡಿದ ಅಶೋಕನ ಸ್ಥಿತಿ ಗಂಭೀರವಾಗಿದೆ. ಈ ಆತ್ಮಹತ್ಯೆಯ ಹಿಂದಿರುವವರನ್ನು ಬಂಧಿಸಬೇಕಾದ ಹೊಸಮನೆ ಠಾಣೆಯ ಎಸ್ ಐ ಸಿದ್ದಪ್ಪ ಕೂಡ ಕೈಚೆಲ್ಲಿ ಕುಳಿತಿರುವುದರ ಹಿಂದೆ ಪೊಲೀಸ್ ಇಲಾಖೆಯ ಮಂಜೇಶ್ವರ್ ಪ್ರಭಾವ ಎದ್ದು ಕಾಣುತ್ತಿದೆ.
ಎಸ್ ಪಿ ನಿಖಿಲ್.ಬಿ. ಮತ್ತು ಭದ್ರಾವತಿ ಡಿವೈಎಸ್ ಪಿ ಪ್ರಕಾಶ್ ರಾಥೋಡ್ ಇಂಥ ಮಾಫಿಯಾದ ವಿರುದ್ಧ ಹಾಗೂ ತಮ್ಮದೇ ಇಲಾಖೆಯ ಒಳಗಿರುವ ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವರೇ?


