*ಸರ್ಕಾರಿ ಭೂಮಿ ಅವ್ಯವಹಾರ; ಭಾಗ-2* *ಹಕ್ಕುದಾಖಲೆ ಶಿರಸ್ತೇದಾರ್ ವಿನಯ್ ಮತ್ತು ಆ ಫೋನ್ ಪೇ ಹಾಕಿಸಿಕೊಂಡ 10 ಸಾವಿರದ ಕಥೆ…* *ಪ್ರಭಾವಿಗಳ ಪ್ರಭಾವದಲ್ಲಿರುವ ವಿನಯ್ ಮೇಲೆ ಲೋಕಾಯುಕ್ತ ದೂರು ದಾಖಲಾಗುವುದೇ?*

*ಸರ್ಕಾರಿ ಭೂಮಿ ಅವ್ಯವಹಾರ; ಭಾಗ-2*

*ಹಕ್ಕುದಾಖಲೆ ಶಿರಸ್ತೇದಾರ್ ವಿನಯ್ ಮತ್ತು ಆ ಫೋನ್ ಪೇ ಹಾಕಿಸಿಕೊಂಡ 10 ಸಾವಿರದ ಕಥೆ…*

*ಪ್ರಭಾವಿಗಳ ಪ್ರಭಾವದಲ್ಲಿರುವ ವಿನಯ್ ಮೇಲೆ ಲೋಕಾಯುಕ್ತ ದೂರು ದಾಖಲಾಗುವುದೇ?*

ಶಿವಮೊಗ್ಗ ತಾಲ್ಲೂಕು ಕಚೇರಿಯಲ್ಲಿರುವ ಅಭಿಲೇಖಾಲಯ ಶಾಖೆಯಲ್ಲಿ ಹಕ್ಕುದಾಖಲೆ ಶಿರಸ್ತೆದಾರ್ ಫೋನ್ ಪೇ ಮೂಲಕವೇ ಲಂಚದ ಹಣ ಪಡೆಯುತ್ತಿದ್ದಾರಾ?

ಈ ಸಂಬಂಧ ಫೋನ್ ಪೇ ದಾಖಲೆಯೊಂದು ವೈರಲ್ ಆಗಿದ್ದು, ಆ ಅಧಿಕಾರಿ ಮಾಡಿಕೊಟ್ಟ ಕೆಲಸವೊಂದಕ್ಕೆ 10 ಸಾವಿರ ರೂ., ಗಳನ್ನು ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾನೆ!

ಶಿವಮೊಗ್ಗದ ತಾಲ್ಲೂಕು ಕಚೇರಿಯಲ್ಲಿರುವ ಹಕ್ಕುದಾಖಲೆ ಶಿರಸ್ತೇದಾರ್ ವಿನಯ್ ಫೋನ್ ಪೇ ಮೂಲಕವೇ ಹಣ ಹಾಕಿಸಿಕೊಳ್ಳುತ್ತಾರೆ‌. ಇವರ ಖಾತೆ ಶೋಧ ಮಾಡಿದರೆ ಇಂಥ ಹತ್ತು ಹಲವು ಪೇಮೆಂಟ್ ಗಳ ವಿವರಗಳು ಲಭ್ಯವಾಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತವೆ ಅವರದೇ ಇಲಾಖೆಯ ಕೆಲ ಮೂಲಗಳು.

2026 ರ ಜನವರಿ 22ರಂದು ಸಂಜೆ 04.14ರ ಹೊತ್ತಿಗೆ ವಿನಯ್ ಅಕೌಂಟಿಗೆ 10,000₹ ಗಳ ಪೇಮೆಂಟ್ ಮಾಡಿರುವ ವ್ಯಕ್ತಿ ಏನಕ್ಕಾಗಿ ಹಣ ಹಾಕಿದರೆಂಬ ಸತ್ಯ ಇನ್ನೂ ಹೊರಕ್ಕೆ ಬಂದಿಲ್ಲ.

ಈ ಹಿಂದೆ ಶಿವಮೊಗ್ಗದಲ್ಲಿದ್ದು ಕಿರಿಕ್ಕಿನ ಕಾರಣದಿಂದ ರಿಪ್ಪನ್ ಪೇಟೆಗೆ ಎತ್ತಂಗಡಿಯಾಗಿದ್ದ ವಿನಯ್ ಈಗ ಮತ್ತೆ ಶಿವಮೊಗ್ಗದ ತಾಲ್ಲೂಕು ಕಚೇರಿಯ ಹುಲ್ಲುಗಾವಲೆಂದೇ ಕರೆಸಿಕೊಳ್ಳುವ ಹಕ್ಕುದಾಖಲೆ ಶಿರಸ್ತೇದಾರ್ ಹುದ್ದೆಯಲ್ಲಿ ಬಂದು ಕುಳಿತಿರುವುದರ ಹಿಂದೆ ಬಹಳಷ್ಟು ಪ್ರಭಾವಗಳಿವೆ. ಆ ಪ್ರಭಾವಿಗಳ ಪ್ರಭಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನಯ್ ಮೇಲೆ ಲೋಕಾಯುಕ್ತಕ್ಕೊಂದು ದೂರು ಸಲ್ಲಿಸಿದರೆ ಆ ಇಲಾಖೆಯಲ್ಲಿ ಕವಿದಿರುವ ಭ್ರಷ್ಟತನದ ಕತ್ತಲಿಗೆ ಬೆಳಕು ಸಿಗಬಹುದು…

*ಹೆಚ್ಚಿನ ವರದಿಗಾಗಿ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯನ್ನು ಗಮನಿಸಿರಿ…*