ಶಿವಮೊಗ್ಗ ಲೋಕಸಭೆಗೆ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ* *ಅಧಿಕೃತ ಮುದ್ರೆ ಒತ್ತಿದ ಹೈ ಕಮಾಂಡ್*

*ಶಿವಮೊಗ್ಗ ಲೋಕಸಭೆಗೆ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ*
*ಅಧಿಕೃತ ಮುದ್ರೆ ಒತ್ತಿದ ಹೈ ಕಮಾಂಡ್*

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ದೆಹಲಿಯ ಹೈಕಮಾಂಡ್ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹೆಸರನ್ನು ಅಂತಿಮಗೊಳಿಸಿದೆ.

ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಧಿಕೃತ ಗೊಂಡಿದ್ದು, ಮೊದಲಿಂದಲೂ ಸಚಿವ ಮಧು ಬಂಗಾರಪ್ಪರವರು ಅಂದುಕೊಂಡಂತೆಯೇ ಗೀತಾ ಶಿವರಾಜ್ ಕುಮಾರ್ ಹೆಸರು ಅಂತಿಮವಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ ಘೋಷಿಸಲ್ಪಡುತ್ತಾರೆಂದು ಹೇಳಿ ಕುತೂಹಲ ಕೆರಳಿಸಿದ್ದ ಮಧು ಬಂಗಾರಪ್ಪ ತಮ್ಮ ಹುಟ್ಟು ಹಬ್ಬದ ದಿನ ತಮ್ಮ ಸಹೋದರಿ ಗೀತಾರವರೇ ಅಭ್ಯರ್ಥಿ ಆಗಲಿರುವ ಸೂಚನೆಯನ್ನೂ ನೀಡಿದ್ದರು.

ಮಹಿಳಾ ದಿನಾಚರಣೆಯ ದಿನವೇ ಕಾಂಗ್ರೆಸ್ ಹೈಕಮಾಂಡ್ ಗೀತಾ ಶಿವರಾಜ್ ಕುಮಾರ್ ಹೆಸರನ್ನು ಫೈನಲ್ ಮಾಡಿ ಬಿಜೆಪಿಗೆ ಸೆಡ್ಡು ಹೊಡೆಯಲು ಪ್ರಯತ್ನ ಆರಂಭಿಸಿದೆ.