*ಸೆ.19ರಂದು ಕಸ್ತೂರಿ ರಂಗನ್ ವರದಿ ಕುರಿತ ಮಾಹಿತಿ ಸಂಗ್ರಹಕ್ಕೆ ಸಿಎಂ ತೀರ್ಥಹಳ್ಳಿಗೆ- ಕಿಮ್ಮನೆ
*ಸೆ.19ರಂದು ಕಸ್ತೂರಿ ರಂಗನ್ ವರದಿ ಕುರಿತ ಮಾಹಿತಿ ಸಂಗ್ರಹಕ್ಕೆ ಸಿಎಂ ತೀರ್ಥಹಳ್ಳಿಗೆ*
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಕಸ್ತೂರಿ ರಂಗನ್ ವರದಿ ಕುರಿತು ಸೆ.21ರಂದು ವಿಶೇಷ ಅಧಿವೇಶನ ಹಮ್ಮಿಕೊಂಡಿದ್ದಾರೆ. ಈ ವರದಿಯ ಪರಿಣಾಮಗಳ ಕುರಿತು ವಿವಿಧ ಜಿಲ್ಲೆಗಳಲ್ಲಿ ಬಹಿರಂಗ ಸಭೆಗಳು, ಸಂವಾದ ಕಾರ್ಯಕ್ರಮಗಳ ಮೂಲಕ ಅಭಿಪ್ರಾಯ,ಮಾಹಿತಿ ಸಂಗ್ರಹಿಸಲು ತೀರ್ಥಹಳ್ಳಿಯಲ್ಲಿ ಸೆ.19ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಆಹ್ವಾನಿತ ಹೋರಾಟಗಾರರು, ಸಂಘಸಂಸ್ಥೆಗಳ ಜೊತೆ ಮುಖ್ಯಮಂತ್ರಿಗಳು ಸಂವಾದ ನಡೆಸಲಿದ್ದಾರೆ ಎಂದರು.
ಕಸ್ತೂರಿ ರಂಗನ್ ವರದಿ ಹಾಗೇ ಇರಲಿ…ಇನ್ನೊಂದು ಸಮಿತಿ ರಚಿಸಿ ವಾಸ್ತವಿಕ ವರದಿ ಪಡೆಯಬಹುದಾಗಿದೆ.1934-35 ನಲ್ಲಿ ಬ್ರಿಟೀಷರಿಂದ ಮ್ಯಾನ್ಯುಯಲ್ ಸರ್ವೆ ಆಗಿದ್ದುಬಿಟ್ಟರೆ ಮತ್ತೆ ಅಂಥ ಸರ್ವೆ ಆಗಿಲ್ಲ. ಈಗ ಬಹಳಷ್ಟು ಬದಲಾವಣೆಗಳಾಗಿವೆ ಎಂದರು.
ಶಿವಮೊಗ್ಗದಲ್ಲೇ ಈ ಕುರಿತು ಸಚಿವ ಸಂಪುಟ ಸಭೆ ನಡೆಸುವ ಕುರಿತು ಮನವಿ ಮಾಡಿಕೊಳ್ಳಬಹುದು ಎಂದರು.


