*ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಪತ್ರಿಕಾಗೋಷ್ಠಿ* *ಸೆ.18ರಂದು ಜೆಡಿಎಸ್ ನಿಂದ ಪ್ರತಿಭಟನಾ ಮೆರವಣಿಗೆ*
*ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಪತ್ರಿಕಾಗೋಷ್ಠಿ*
*ಸೆ.18ರಂದು ಜೆಡಿಎಸ್ ನಿಂದ ಪ್ರತಿಭಟನಾ ಮೆರವಣಿಗೆ*
ಕಸ್ತೂರಿ ರಂಗನ್ ವರದಿ 7ನೇ ಬಾರಿ ಮಂಡನೆಗೆ ಕೇಂದ್ರಸರ್ಕಾರ ಹೊರಟಿದ್ದು, ಲಕ್ಷಾಂತರ ರೈತರು ಅನ್ಯಾಯಕ್ಕೊಳಗಾಗಲಿದ್ದಾರೆ. ಇದನ್ನು ವಿರೋಧಿಸಿ ಸೆ.18ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೆಪಿಎಸ್ ಸಿ ಹಗರಣವನ್ನು ಸಿಬಿಐಗೆ ವಹಿಸಿ. ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದೆ. ಶಿವಮೊಗ್ಗ ಜಿಲ್ಲೆಯ 7 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಈ ಮೂರು ವಿಷಯಗಳನ್ನಿಟ್ಟುಕೊಂಡು ಹೋರಾಟ ನಡೆಯಲಿದೆ ಎಂದರು.
ಪ್ರತಿಭಟನಾ ಮೆರವಣಿಗೆಯು ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜೆಡಿಎಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಹೋರಾಟ ನಡೆಯಲಿದೆ ಎಂದರು.


