*ಗಣೇಶ ಮತ್ತು ಸುಬ್ರಹ್ಮಣ್ಯನ ಕಥೆ ಹೇಳಿ ಪ್ರಥಮ ಪತ್ರಿಕಾಗೋಷ್ಠಿ ಆರಂಭಿಸಿದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್* ಸಿಎಂ ಕಾರ್ಯಕ್ರಮಕ್ಕೆ 25 ಸಾವಿರ ಜನ ಪಕ್ಷ ಸಂಘಟನೆಗೆ ವಿಶೇಷ ಟಾಸ್ಕ್ ಬಣ ರಾಜಕಾರಣ ಈವರೆಗೆ ಕಂಡಿಲ್ಲ
*ಗಣೇಶ ಮತ್ತು ಸುಬ್ರಹ್ಮಣ್ಯನ ಕಥೆ ಹೇಳಿ ಪ್ರಥಮ ಪತ್ರಿಕಾಗೋಷ್ಠಿ ಆರಂಭಿಸಿದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್*
ಸಿಎಂ ಕಾರ್ಯಕ್ರಮಕ್ಕೆ 25 ಸಾವಿರ ಜನ
ಪಕ್ಷ ಸಂಘಟನೆಗೆ ವಿಶೇಷ ಟಾಸ್ಕ್
ಬಣ ರಾಜಕಾರಣ ಈವರೆಗೆ ಕಂಡಿಲ್ಲ
ಸಂಘಟನ್ ಸೃಜನ್ ಅಭಿಯಾನ್ ಮೂಲಕ ನಾನು ಅಧ್ಯಕ್ಷನಾಗಿದ್ದೇನೆ. ಎಲ್ಲರನ್ನೂ ಒಟ್ಟು ಮಾಡಿ ಸಂಘಟನೆ ಬಲಗೊಳಿಸುತ್ತೇನೆ. ಎಲ್ಲರ ಜೊತೆ ಹೆಜ್ಜೆ ಹಾಕಿ ಒಟ್ಟಿಗೊಯ್ಯಲು ಹಿರಿಯ ನಾಯಕರೆಲ್ಲ ನಿರ್ದೇಶನ ನೀಡಿದ್ದಾರೆ. ಅವರ ಸಲಹೆಯಂತೆ ಮುಂದುವರೆಯುವೆ.
ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಂಘಟನೆ ಮಾಡುತ್ತಾ ಬಂದಿದ್ದೇನೆ.
ಮುಖ್ಯಮಂತ್ರಿಗಳು ಕಸ್ತೂರಿ ರಂಗನ್ ಸಂತ್ರಸ್ತರ ವಿಚಾರವಾಗಿ ಪ್ರಥಮ ಬಾರಿಗೆ ಬರುತ್ತಿದ್ದಾರೆ. 25 ಸಾವಿರ ಜನ ರೈತರನ್ನು ಸೇರಿಸುವ ಗುರಿ ಹೊಂದಿದ್ದೇವೆ. ಸರ್ಕಾರಿ ಕಾರ್ಯಕ್ರಮವಾದರೂ ಪಕ್ಷದ ವಿಶೇಷ ಪ್ರಯತ್ನವೂ ನಡೆಯಲಿದೆ.ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು.
ಸೆ.21 ರಂದು ಕಸ್ತೂರಿ ರಂಗನ್ ವರದಿ ಹಿನ್ನೆಲೆ ವಿಶೇಷ ಅಧಿವೇಶನ ನಡೆಯಲಿದೆ.ಉಳಿದ ಎರಡು ದಿನ ಬರ, ರೈತರ ಸಮಸ್ಯೆ ಕುರಿತು ಸಿಎಂ ನೇತೃತ್ವದಲ್ಲಿ ಅಧಿವೇಶನ ನಡೆಯಲಿದೆ.
ಡಿಸೆಂಬರ್ ಒಳಗೆ ಪಂಚಾಯ್ತಿ ಚುನಾವಣೆ ಸಾಧ್ಯತೆ ಇದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೂ ಪಕ್ಷದ ಮೂಲಕ ನನಗೆ ಟಾಸ್ ನೀಡಿದ್ದಾರೆ. ಪಕ್ಷ ಕ್ರಿಯಾಶೀವಾಗಿಡುವ ಹಿನ್ನೆಲೆಯಲ್ಲಿ ಕೆಲಸ ಮಾಡಲಿದ್ದೇನೆ.


