*ಶಿವಮೊಗ್ಗ ಪಾಸ್ ಪೋರ್ಟ್(shimoga pass port office) ಕೇಂದ್ರದಲ್ಲಿ ಸಿಬ್ಬಂದಿ ಹರ್ಷರ ಹಾರ್ಡ್ ಕೋರ್ ವರ್ತನೆ…* *ಕ್ರಮ ಕೈಗೊಳ್ಳುವುದೇ ಬೆಂಗಳೂರಿನ RPO?* *ಕೇಂದ್ರ ಸರ್ಕಾರದ ministry of external Affairs(passport Services) ಏನು ಕ್ರಮ ಕೈಗೊಳ್ಳುವುದು?* *ಮಧ್ಯಾಹ್ನ 1 ಗಂಟೆಗೇ ಕಚೇರಿ ಬಿಟ್ಟು ಓಡಿ ಹೋದ ಅಧಿಕಾರಿ ಹರ್ಷರಿಂದ ಸಾರ್ವಜನಿಕರಿಗೆ ತೊಂದರೆ*
*ಶಿವಮೊಗ್ಗ ಪಾಸ್ ಪೋರ್ಟ್(shimoga pass port office) ಕೇಂದ್ರದಲ್ಲಿ ಸಿಬ್ಬಂದಿ ಹರ್ಷರ ಹಾರ್ಡ್ ಕೋರ್ ವರ್ತನೆ…*
*ಕ್ರಮ ಕೈಗೊಳ್ಳುವುದೇ ಬೆಂಗಳೂರಿನ RPO?*
*ಕೇಂದ್ರ ಸರ್ಕಾರದ ministry of external Affairs(passport Services) ಏನು ಕ್ರಮ ಕೈಗೊಳ್ಳುವುದು?*
*ಮಧ್ಯಾಹ್ನ 1 ಗಂಟೆಗೇ ಕಚೇರಿ ಬಿಟ್ಟು ಓಡಿ ಹೋದ ಅಧಿಕಾರಿ ಹರ್ಷರಿಂದ ಸಾರ್ವಜನಿಕರಿಗೆ ತೊಂದರೆ*

ಸಾಗರದಿಂದ ಶಿವಮೊಗ್ಗದ ಕೇಂದ್ರ ಕಚೇರಿಯ ಆವರಣದಲ್ಲಿರುವ ಪಾಸ್ ಪೋರ್ಟ್ ಕಚೇರಿಗೆ ಬಂದಿದ್ದ ಹಿರಿಯ ನಾಗರೀಕರೊಬ್ಬರು ತಮ್ಮ ಪರಿಚಿತ ಯುವ ಪತ್ರಕರ್ತರಿಂದ ಮಾಹಿತಿ, ಮಾರ್ಗದರ್ಶನ ಪಡೆಯುತ್ತಿರುವುದನ್ನು ಸಹಿಸದ ಕಚೇರಿಯ ಸಿಬ್ಬಂದಿ ಹೊರಗೆ ಹೋಗಿ ಎಂದು ಅವರದೇ ಮನೆಗೆ ಬಲವಂತವಾಗಿ ನುಗ್ಗಿ ಬಂದಂತೆ ವರ್ತಿಸಿದ್ದಲ್ಲದೇ ಅನಾಗರೀಕವಾಗಿ ವರ್ತಿಸಿದ್ದು ಅಲ್ಲಿದ್ದ ಸಾರ್ವಜನಿಕರಿಗೂ ವಿಚಿತ್ರವಾಗಿ ಕಂಡಿತು.
ಶಿವಮೊಗ್ಗದ ಪಾಸ್ ಪೋರ್ಟ್ ಕಚೇರಿಯಲ್ಲಿ ಪಾಸ್ ಪೋರ್ಟ್ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಮನುಷ್ಯನಂತೆ ವರ್ತಿಸಬೇಕಾದ ಹರ್ಷ ಎಂಬ ಯುವ ಅಧಿಕಾರಿ ಹಿಟ್ಲರ್ ನಂತೆ ವರ್ತಿಸಿ ಒಂದಿಷ್ಟು ಹೊತ್ತು ಕಚೇರಿಯಲ್ಲಿ ಕಿರಿಕಿರಿಯ ವಾತಾವರಣಕ್ಕೆ ಕಾರಣವಾಗಿದ್ದು ಅಸಹ್ಯವೆನಿಸಿತು.
ಪಾಸ್ ಪೋರ್ಟ್ ಗಾಗಿ ಬರುವ ವಯೋವೃದ್ಧರು, ವಿದ್ಯಾರ್ಥಿಗಳು, ಗ್ರಾಮೀಣ ಜನ ಇಂಥ ಅಧಿಕಾರಿಯ ಜಂಬದ ವರ್ತನೆಯಿಂದ ಬೇಸತ್ತಿದ್ದು, ಈ ಹರ್ಷ ಎಂಬ ಅಧಿಕಾರಿಯ ವಿರುದ್ಧ ಶಿವಮೊಗ್ಗದ ಕೆಲ ಸಂಘಟನೆಗಳು ಸಹಿ ಸಂಗ್ರಹ ಚಳುವಳಿ, ಧರಣಿ ಸತ್ಯಾಗ್ರಹ ಮಾಡುವ ಸಾಧ್ಯತೆಗಳಿವೆ.
ಹಿರಿಯರ ಜೊತೆ ಅವರ ಸಂಬಂಧಿಕರು ಇರಬಹುದೆಂಬ ಸಾಮಾನ್ಯ ಜ್ಞಾನವೂ ಇಲ್ಲದ ಹರ್ಷ ಎಂಬ ಮಾನಸಿಕ ದುಃಖಿ ಪಾಸ್ ಪೋರ್ಟ್ ಅಧಿಕಾರಿಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದೇ?
ಸಂಬಂಧಿಸಿದ ಇಲಾಖೆಗೂ ಕೇಂದ್ರ ಸರ್ಕಾರಕ್ಕೂ ನೊಂದವರು ದೂರು ಕೊಡುತ್ತಿದ್ದು, ಮನುಷ್ಯತ್ವ ಇರುವ ಅಧಿಕಾರಿಗಳು ಪಾಸ್ ಪೋರ್ಟ್ ಕಚೇರಿಯಲ್ಲಿ ಕೆಲಸ ಮಾಡಬೇಕಿದೆ. ಇದು ಸಾರ್ವಜನಿಕರ ಅಹವಾಲು…


