*ಶಾಸಕ ಬಿ.ಕೆ.ಸಂಗಮೇಶ್ ರವರ ಪುತ್ರ ಬಿ.ಎಸ್.ಬಸವೇಶ್- ಮುಖ್ಯಮಂತ್ರಿ ಡಿ.ಕೆ.ಶಿ. ಮತ್ತು ಬೆಳ್ಳಿಗದ್ದೆ ಸ್ಥೈರ್ಯ!* *ಏನಿದು ಬಸವೇಶ್ ವಿಶೇಷ?*

*ಶಾಸಕ ಬಿ.ಕೆ.ಸಂಗಮೇಶ್ ರವರ ಪುತ್ರ ಬಿ.ಎಸ್.ಬಸವೇಶ್- ಮುಖ್ಯಮಂತ್ರಿ ಡಿ.ಕೆ.ಶಿ. ಮತ್ತು ಬೆಳ್ಳಿಗದ್ದೆ ಸ್ಥೈರ್ಯ!*

*ಏನಿದು ಬಸವೇಶ್ ವಿಶೇಷ?*

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀರ್ಥಹಳ್ಳಿಯಿಂದ ನೇರವಾಗಿ ಚಿಕ್ಕಮಗಳೂರು ಜಿಲ್ಲೆಯ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಜೀರ್ಣೋದ್ಧಾರ ಭೂಮಿ ಪೂಜೆಗೆ ಬಾಳೆಹೊನ್ನೂರಿಗೆ ಆಗಮಿಸಿದ ಸಂದರ್ಭದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ರವರ ಪುತ್ರ ಬಿ.ಎಸ್.ಬಸವೇಶ್ ರವರು ಬೆಳ್ಳಿಗದೆ ನೀಡಿ ವಿಶೇಷ ಗಮನ ಸೆಳೆದರು.

ಬಿ.ಎಸ್.ಬಸವೇಶ್ ರವರು ಸಾರ್ವಜನಿಕ ಸೇವೆಯ ಮೂಲಕ ವಿಶೇಷ ರೀತಿಯಲ್ಲಿ ಗಮನ ಸೆಳೆಯುತ್ತಿರುವ ಬಸವೇಶ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ವಿಶೇಷ ಆಪ್ತರಲ್ಲಿ ಗುರುತಿಸಿಕೊಂಡಿದ್ದು, ಇಂದು ಬಾಳೆಹೊನ್ನೂರಿನಲ್ಲಿ ಬೆಳ್ಳಿಗದೆ ನೀಡುವುದರ ಮೂಲಕ ರಾಜ್ಯದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ ಡಿಕೆಶಿಯವರಿಗೆ ಮತ್ತಷ್ಟು ಸ್ಥೈರ್ಯ ತುಂಬುವ ಮೂಲಕ ಗಮನ ಸೆಳೆದರು. ಸಾರ್ವಜನಿಕರ ಪ್ರೀತಿಗೂ ಈ ಮೂಲಕ ಪಾತ್ರರಾದರು.