*ಶಿವಮೊಗ್ಗ ಮಹಾನಗರ ಪಾಲಿಕೆ ದಸರಾ-2026* *ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಮಹಿಳಾ ದಸರಾ – ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ*
*ಶಿವಮೊಗ್ಗ ಮಹಾನಗರ ಪಾಲಿಕೆ ದಸರಾ-2026*
*ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಮಹಿಳಾ ದಸರಾ – ವೈವಿಧ್ಯಮಯ ಸ್ಪರ್ಧೆಗಳ ಆಯೋಜನೆ*

ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ದಸರಾ ಸಮಿತಿಯ ವತಿಯಿಂದ ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಮಹಾನಗರ ಪಾಲಿಕೆ ವ್ಯಾಪ್ತಿಯ ಮಹಿಳೆಯರಿಗಾಗಿ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 01 ರಂದು ಬೆಳಿಗ್ಗೆ 10:00 ಗಂಟೆಗೆ ಶಿವಮೊಗ್ಗದ ‘ವೀರಶೈವ ಕಲ್ಯಾಣ ಮಂದಿರ’ದಲ್ಲಿ ಮಹಿಳಾ ದಸರಾ, ಆಟೋಟ ಹಾಗೂ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
*ಸ್ಪರ್ಧೆಗಳ ವಿವರಗಳು:*
ದಿನಾಂಕ 30-09-2026: ಸಾಕ್ಷಾತ್ ದೇವಿ ಅಲಂಕಾರ ಸ್ಪರ್ಧೆ (ನಿಯಮಗಳೊಂದಿಗೆ), ವಿವಿಧ ವೈಯಕ್ತಿಕ ಆಟೋಟ ಸ್ಪರ್ಧೆಗಳು, ಅಂತ್ಯಾಕ್ಷರಿ ಹಾಗೂ ಮೆಹಂದಿ ಸ್ಪರ್ಧೆ.
ದಿನಾಂಕ 01-10-2026: ಕರ್ನಾಟಕದ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆ ಹಾಗೂ “ಮಹಾ ನಟಿಯರು” ಶಿವಮೊಗ್ಗ ಮಹಿಳಾ ದಸರಾ 2026 ಸ್ಪರ್ಧೆ ನಡೆಯಲಿವೆ.
“ಮಹಾ ನಟಿಯರು” ಶಿವಮೊಗ್ಗ ಮಹಿಳಾ ದಸರಾ 2026 ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ದಿನಾಂಕ 28-09-2026 ರೊಳಗಾಗಿ ತಮ್ಮ ಹೆಸರುಗಳನ್ನು ಮೊಬೈಲ್ ಸಂಖ್ಯೆಗಳಾದ 9738710364, 8495820268, 9480113313 ಗಳಿಗೆ ನೊಂದಾಯಿಸಿಕೊಳ್ಳಬೇಕಾಗಿ ಕೋರಲಾಗಿದೆ.
ಈ ಕಾರ್ಯಕ್ರಮದಲ್ಲಿ ಪಾಲಿಕೆ ವ್ಯಾಪ್ತಿಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮಹಿಳಾ ದಸರಾ ಸಮಿತಿ-2026ರ ಸದಸ್ಯ ಕಾರ್ಯದರ್ಶಿಗಳು ವಿನಂತಿಸಿದ್ದಾರೆ.


