*ಎಲ್ಲರಿಗೂ ಈಡಿಯಟ್ ಅಂದ್ರೆ ನೀನೇನು?;* *ಸೂಡಾ ಸುಂದರೇಶ್ ರಿಗೆ ಅವಾಝ್ ಹಾಕಿದ ಆರ್.ಪ್ರಸನ್ನ ಕುಮಾರ್*

*ಎಲ್ಲರಿಗೂ ಈಡಿಯಟ್ ಅಂದ್ರೆ ನೀನೇನು?;*

*ಸೂಡಾ ಸುಂದರೇಶ್ ರಿಗೆ ಅವಾಝ್ ಹಾಕಿದ ಆರ್.ಪ್ರಸನ್ನ ಕುಮಾರ್*

ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡ್ತಾ ನನ್ ವಿಚಾರವಾಗಿ ಮಾತಾಡಬೇಕಾದ್ರೆ ಜಾತಿ ಹಿಡಿದು ದಡ್ಡ ಕುರುಬ ಎಂದಿದ್ದಾರೆ. ಅಂಥ ಮಾತಾಡುವ ಯೋಗ್ಯತೆ ಅವರಿಗಿಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ, ಮಾಜಿ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಖಾರವಾಗಿ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಂದರೇಶ್ ಗೆ ಆತ್ಮಸಾಕ್ಷಿ ಇದ್ರೆ ತಕ್ಷಣ ಕುರುಬ ಸಮಾಜದ ಕ್ಷಮೆ ಕೇಳಬೇಕು. ಅಹಂಕಾರ ಬಿಟ್ಟು ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ಸಮಾಜ ಬುದ್ಧಿ ಕಲಿಸಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಧ್ಯಕ್ಷರಾದವರು ಮಾಹಿತಿಗಳನ್ನು ನೀಡುವ ಜವಾಬ್ದಾರಿ ಹೊತ್ತಿರುತ್ತಾರೆ. ಸಂಘಟನ್ ಸೃಜನ್ ಅಭಿಯಾನದ ಮೂಲಕ ಅಧ್ಯಕ್ಷರಾಗಿದ್ದನ್ನು ಟೀಕೆ ಮಾಡುವ ಮೂಲಕ ರಾಹುಲ್ ಗಾಂಧಿಯವರನ್ನೇ ಅನುಮಾನಿಸಿದ್ದಾರೆ.

ಕಿತ್ತೋದ ಕಾಡಾ, ಸೂಡಾ ಅಂದ ಸುಂದರೇಶ್ ಅದೇ ಅಧಿಕಾರದಲ್ಲಿ ಮುಂದುವರೆದಿದ್ದೇಕೆ. ಸೋಡಿಯಂ, ಪೊಟ್ಯಾಷಿಯಂ ಸರಿ ಇದ್ದಂತೆಯೇ ಕಾಣುತ್ತಿದೆ. ನಿನ್ ಸಮಾಜದ ಬಗ್ಗೆ ದೂಷಣೆ ಮಾಡಿಕೊಂಡು ಕ್ಷಮೆ ಕೇಳ್ತೀ. ಯಾವ ಭಾಷೆಯಲ್ಲಿ ಸುಂದರೇಶ್ ಮಾತಾಡುತ್ತಿದ್ದಾನೆ? ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಗಿಲ್ಲ ಅಂದಕೂಡಲೇ ಹೀಗೆಲ್ಲ ಮಾತಾಡ್ತಿದಾನೆ.

ಬಿ.ವಿ.ಶ್ರೀನಿವಾಸ್ ಕೆಳ ಮಟ್ಟದಿಂದ ದೊಡ್ಡಮಟ್ಟಕ್ಕೆ ಬೆಳೆದಿದ್ದಾರೆ. ಸಣ್ಣ ಸ್ಥಾನದಲ್ಲಿದ್ದವರು ಬೆಳೆದರೆ ಸಂತೋಷ ಪಡಬೇಕು. ಮಂಜುನಾಥ ಭಂಡಾರಿ ಏನು? ಅಂದ್ಯಲ್ಲ ಪ್ರಶ್ನಿಸೋದಕ್ಕಿಂತ ಅವರ ಹುದ್ದೆ ಯಾವುದು ಅಂತ ಅರ್ಥಮಾಡಿಕೊಂಡು ಗೌರವಕೊಡಬೇಕು

ಎಲ್ಲರಿಗೂ ಈಡಿಯಟ್ ಅಂದ್ರೆ ನೀನೇನು?
ಸಮಸ್ಯೆ ಇದ್ರೆ ಕೆಪಿಸಿಸಿ, ಎಐಸಿಸಿ ಅಧ್ಯಕ್ಷರ ಮುಂದೆ ಹೇಳಿಕೊಳ್ಳಲಿ. ಸೂಡಾದ ಅಷ್ಟೂ ಕಾರ್ಯಕ್ರಮಗಳಲ್ಲಿ ಒಂದರಲ್ಲೂ ಜಿಲ್ಲಾ ಮಂತ್ರಿಯವರಿಗೆ ಆಹ್ವಾನ ನೀಡಿಲ್ಲ. ಒಂದೇ ಒಂದು ಫೋಟೋ ಕೂಡ ಮಂತ್ರಿಗಳದ್ದು ಹಾಕಿಲ್ಲ.

ಭಿನ್ನಮತಕ್ಕೆ ಸುಂದರೇಶ್ ಮೈಕ್ ಆಗಿದ್ದಾರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಂತ ಬುದ್ದಿ ಇರುತ್ತಲ್ಲ. ಚಿತಾವಣೆ ಅಂಥದ್ದೇನಿಲ್ಲ.

ಮಂತ್ರಿಗಳ ಬಳಿ ಸೋಡಿಯಂ ಎಲ್ಲಿದೆ? ಅದು ಸುಂದರೇಶ್ ಬಾಡಿಯಲ್ಲೇ ಇದೆ.