*ಶಿವಮೊಗ್ಗ ವಿಮಾನ ನಿಲ್ದಾಣ ಯಾವುದೇ ಕಾರಣಕ್ಕೂ ಮುಚ್ಚಬಾರದು; ಇದರಲ್ಲಿ ರಾಜಕಾರಣ ಬೇಡ* *ಗೋವಿಂದಾಪುರ ಆಶ್ರಯ ಮನೆಗಳ ವಿತರಣೆ;* *ನ.15 ರಂದು ಈಶ್ವರಪ್ಪ ಮನೆಯಿಂದಲೇ ಗೋವಿಂದಾಪುರಕ್ಕೆ ಹೋಗಲಿದ್ದಾರೆ ಫಲಾನುಭವಿಗಳು* *ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿಕೆ.ಎಸ್.ಈಶ್ವರಪ್ಪ*
*ಶಿವಮೊಗ್ಗ ವಿಮಾನ ನಿಲ್ದಾಣ ಯಾವುದೇ ಕಾರಣಕ್ಕೂ ಮುಚ್ಚಬಾರದು; ಇದರಲ್ಲಿ ರಾಜಕಾರಣ ಬೇಡ*
*ಗೋವಿಂದಾಪುರ ಆಶ್ರಯ ಮನೆಗಳ ವಿತರಣೆ;*
*ನ.15 ರಂದು ಈಶ್ವರಪ್ಪ ಮನೆಯಿಂದಲೇ ಗೋವಿಂದಾಪುರಕ್ಕೆ ಹೋಗಲಿದ್ದಾರೆ ಫಲಾನುಭವಿಗಳು*
*ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿಕೆ.ಎಸ್.ಈಶ್ವರಪ್ಪ*
ಶಿವಮೊಗ್ಗದಲ್ಲಿ ಯವುದೇ ರಾಜಕೀಯ ಪಕ್ಷದ ರಾಜಕಾರಣಿಯಾಗಿರಲಿ ಅಭಿವೃದ್ಧಿಯ ವಿಷಯ ಬಂದಾಗ ಯಾವುದೇ ರಾಜಕೀಯ ಮಾಡದೇ ಒಂದಾಗುವುದು ವಿಶೇಷ. ಈಗ ಇಂತಹ ಒಂದು ಸಂದರ್ಭ ಬಂದಿದೆ. ನೂರಾರು ಕೋಟಿ ಹಣ ವ್ಯಯಿಸಿ ನಿರ್ಮಿಸಲಾದ ಶಿವಮೊಗ್ಗ ವಿಮಾನ ನಿಲ್ದಾಣ ವಿಮಾನಯಾನ ಕಂಪನಿಗಳ ನಿರ್ಧಾರದಿಂದ ವಿಮಾನ ಹಾರಟವೇ ಸ್ತಬ್ಧವಾಗಿ ಮಲೆನಾಡಿಗೆ ವಿಮಾನ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಮಾನ ನಿಲ್ದಾಣವು ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮದಂತಹ ವಿಚಾರದಲ್ಲಿ ಸಂಪರ್ಕ ಸೇತುವೆಯಾಗಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಬೇಕಾದ ಸಂದರ್ಭದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ ಸ್ಥಗಿತಗೊಳ್ಳುವ ಪರಿಸ್ಥಿತಿ ಬಂದಿರುವುದು ನಾವೆಲ್ಲರೂ ಯೋಚಿಸಬೇಕಾದ ವಿಷಯ ಎಂದರು.
ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಇಂಡಿಗೋ, ಸೈಸ್ಜೆಟ್ ಸಂಸ್ಥೆಗಳು ವಿಮಾನ ಹಾರಟವನ್ನು ನಿಲ್ಲಿಸಿವೆ. ಹಾಗೂ ಇದೇ ನವೆಂಬರ್ 21 ರಿಂದ ಸ್ಟ್ರಾರ್ವಿರ್ವೇಸ್ ಕೂಡ ಬುಕ್ಕಿಂಗ್ ಸ್ಥಗಿತಗೊಳಿಸುತ್ತಿರುವುದು ಆತಂಕದ ವಿಷಯವಾಗಿದೆ. ಈ ವಿಚಾರವಾಗಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು, ರಾಜಕೀಯೇತರ ಸಂಘ ಸಂಸ್ಥೆಗಳು, ರೈತ ಹೋರಾಟಗಾರರು ಅದರಲ್ಲೂ ವಿಶೇಷವಾಗಿ `ಛೇಂಬರ್ ಆಫ್ ಕಾಮರ್ಸ್ ಹೀಗೆ ಎಲ್ಲರೂ ಒಟ್ಟಾಗಿ ಪ್ರಯತ್ನಿಸಿದರೆ “ರಾಷ್ಟ್ರಕವಿ ಕುವೆಂಪು” ವಿಮಾನ ನಿಲ್ದಾಣವು ಯಾವುದೇ ಆಡೆ ತಡೆ ಇಲ್ಲದೆ ಕಾರ್ಯನಿರ್ವಹಿಸುವಂತೆ ಮಾಡಲು ಯಶಸ್ವಿಯಾಗಬಹುದು. ಇಂತಹಾ ಒಂದು ಪ್ರಯತ್ನಕ್ಕೆ ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿ ಸ್ಥಾಪನೆಯಾಗಲು ನಡೆಯುತ್ತಿರುವ ಹೋರಾಟ ಮಾದರಿಯಾಗಬಹುದು. `ಉಡಾನ್’ ಯೋಜನೆ ಮನರ್ಸ್ಥಾಪನೆಗೊಳ್ಳುವವರೆಗೂ ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡುತ್ತಿರುವ ಹಾಗೆಯೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೂ ನೆರವು ನೀಡಿ ವಿಮಾನ ಹಾರಾಟ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಮಧು ಬಂಗಾರಪ್ಪನವರು ಸರ್ಕಾರದ ಮೇಲೆ ಒತ್ತಡ ತರಬೇಕು.
ನಿನ್ನೆ ಶಿವಮೊಗ್ಗಕ್ಕೆ ಬೇಟಿ ನೀಡಿದ್ದ ಕೆಎಸ್ಐಐಡಿಸಿ ಅಧ್ಯಕ್ಷ ನಂಜುಂಡಯ್ಯನಮಠ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿ ಹೋಗಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ವಿಮಾನಯಾನ ಸೇವೆ ಪುನಾರಾರಂಭಗೊಳ್ಳಲು ಇನ್ನೂ 3 ರಿಂದ 4 ತಿಂಗಳು ಬೇಕಾಗಬಹುದು ಎಂದಿದ್ದಾರೆ. ಉಡಾನ್ ಯೋಜನೆಯ ಗಡುವು ಸಮೀಪಿಸುತ್ತಿದ್ದರೂ ಮುಂಜಾಗ್ರತೆ ವಹಿಸಿ ಪರ್ಯಾಯ ಕ್ರಮ ಕೈಗೊಳ್ಳಬೇಕಾಗಿದ್ದ ರಾಜ್ಯ ಸರ್ಕಾರದ ನಿರ್ಲಕ್ಷ ದೋರಣೆ ಇಲ್ಲಿ ಎದ್ದು ಕಾಣುತ್ತಿದೆ. ರಾಜ್ಯ ಸರ್ಕಾರವೇ ನಿರ್ವಹಿಸುತ್ತಿರುವ ಈ ವಿಮಾನ ನಿಲ್ದಾಣವನ್ನು ಈ ರೀತಿ ಆತಂತ್ರ ಸ್ಥಿತಿಗೆ ತಂದೊಡ್ಡಿರುವ ಇವರು ಜಿಲ್ಲೆಯ ನಾಗರೀಕರಿಗೆ, ವಾಣಿಜ್ಯೋದ್ಯಮಿಳಿಗೆ, ಪ್ರಾವಾಸಿಗರಿಗೆ ದ್ರೋಹ ಬಗೆದಿದ್ದಾರೆ. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನೇ ಹೊಣೆ ಮಾಡುತ್ತಿರುವ ಇವರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ನಾಗರೀಕ ವಿಮಾನಯಾನ ಪ್ರಾಧಿಕಾರಕ್ಕೆ ಬಿಟ್ಟುಕೊಡುವುದು ಒಳ್ಳೆಯದು.
ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಾಪನೆಯಾಗಲು ಸಾಕಷ್ಟು ಪರಿಶ್ರಮ ಪಟ್ಟು ಬಿ.ಎಸ್.ಯಡ್ಯೂರಪ್ಪ ಮತ್ತು ಸಂಸದಾರದ ಬಿ.ವೈ.ರಾಘವೇಂದ್ರ ಅವರ ಶ್ರಮ ವ್ಯರ್ಥವಾಗಬಾರದು ಮತ್ತು ನೂರಾರು ಎಕರೆ ಕೃಷಿ ಭೂಮಿಯನ್ನು ಕಳೆದುಕೊಂಡ ರೈತರಿಗೂ ಅನ್ಯಾಯವಾಗಬಾರದು. ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಸಿಬ್ಬಂದಿಗಳು ಸಹಾ ಅತಂತ್ರರಾಗಬಾರದು. ಈ ವಿಮಾನ ನಿಲ್ದಾಣ ಆರಂಭಗೊಂಡಾಗಿನಿಂದ ನಮ್ಮ ರಾಜ್ಯವಲ್ಲದೇ ತಮಿಳುನಾಡು, ಕೇರಳ, ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಹಾಗೂ ಇನ್ನಿತರ ರಾಜ್ಯ ಮತ್ತು ದೇಶ ವಿದೇಶದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಿದೆ. ಅಲ್ಲದೇ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನೈಟ್ ಲ್ಯಾಂಡಿಂಗ್ ಸಿಸ್ಟಮ್ ಕೂಡ ಸದ್ಯದಲ್ಲೇ ಕಾರ್ಯನಿರ್ವಹಣೆಗೆ ಸಿದ್ದವಾಗಲಿದ್ದು ಇದರಿಂದ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ, ರೈತರ ಭೂಮಿ ಹಲವಾರು ಜನರ ಶ್ರಮ ಇಲ್ಲಿ ಉಪಯೋಗವಾಗಿದ್ದು ಈ ವಿಮಾನ ನಿಲ್ದಾಣ ಕಾರ್ಯಾಚರಣೆ ನಿಲ್ಲಿಸಿದರೆ ಎಲ್ಲಾ ವ್ಯರ್ಥವಾಗಲಿದೆ. ಆದ್ದರಿಂದ ಈ ವಿಮಾನ ನಿಲ್ದಾಣ ಅಸ್ಥಿ ಪಂಜರ ಆಗುವುದನ್ನು ತಡೆಯಲು ಎಲ್ಲರೂ ಪಕ್ಷ ಬೇದ ಮರೆತು ಸಂಘಟಿತರಾಗಿ ಹೋರಾಡೋಣ ಎಂದರು.
*ಆಶ್ರಯ; 32 ಮನೆಗಳ ವಿತರಣೆ;*
106 ಮನೆಗಳನ್ನು ಹತ್ತು ದಿನಗಳಲ್ಲಿ ವಿತರಿಸಲು ಆಯುಕ್ತರು ಒಪ್ಪಿಕೊಂಡಿದ್ದಾರೆ. ಜನವರಿ ಅಂತ್ಯದೊಳಗೆ 700 ಮನೆಗಳ ವಿತರಣೆ ಮಾಡಲಿದ್ದಾರೆ. ಇದು ರಾಷ್ಟ್ರಭಕ್ತರ ಬಳಗದ ಹೋರಾಟದ ಫಲ.
5 ಕೋಟಿ ರೂ.,ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿಸಿದ್ದಾರೆ. ಉಳಿದ ಫಲಾನುಭವಿಗಳಿಗೂ ಮನೆಗಳ ವಿತರಣೆ ನಡೆಯಲಿದೆ ಎಂದು ಈಶ್ವರಪ್ಪ ಹೇಳಿದರು.
ನ.15 ರಂದು ಮನೆಯಿಂದಲೇ ಫಲಾನುಭವಿಗಳ ಜೊತೆ ಬಸ್ ಗಳಲ್ಲಿ ಗೋವಿಂದಾಪುರಕ್ಕೆ ಹೋಗಿ ಸೂಕ್ತ ವ್ಯವಸ್ಥೆ ಮಾಡಲಿದ್ದೇವೆ. ಆಯುಕ್ತರಿಗೂ ಸಚಿವರಿಗೂ ಅಭಿನಂದನೆಗಳು…


