416 ಜನರಿಗೆ ಸ್ವಂತ ಆಶ್ರಯದ ಕನಸು ನನಸು ಮಾಡಿದ ಭದ್ರಾವತಿ ಶಾಸಕ ಸಂಗಮೇಶ್… 2048 ಜನರಿಗೆ ಆಶ್ರಯದ ಗುರಿ…ಗಮನ ಸೆಳೆದ ಕಾರ್ಯಕ್ರಮ
416 ಜನರಿಗೆ ಸ್ವಂತ ಆಶ್ರಯದ ಕನಸು ನನಸು ಮಾಡಿದ ಭದ್ರಾವತಿ ಶಾಸಕ ಸಂಗಮೇಶ್…
2048 ಜನರಿಗೆ ಆಶ್ರಯದ ಗುರಿ…ಗಮನ ಸೆಳೆದ ಕಾರ್ಯಕ್ರಮ

ರಾಜೀವ್‌ಗಾಂಧಿ ವಸತಿ ನಿಗಮ ನಿಯಮಿತ, ವಸತಿ ಇಲಾಖೆ ವತಿಯಿಂದ ಆಯ್ಕೆಯಾಗಿರುವ ಒಟ್ಟು 2048 ಫಲಾನುಭವಿಗಳ ಪೈಕಿ ಮೊದಲನೇ ಹಂತದಲ್ಲಿ 416 ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರು ಹಾಗೂ KRIDL ಅಧ್ಯಕ್ಷರಾದ ಬಿ.ಕೆ. ಸಂಗಮೇಶ್ವರ ಅವರು, ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಬಿ.ಕೆ. ಮೋಹನ್ ಅವರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ಉಪಾಧ್ಯಕ್ಷರಾದ ಬಿ.ಕೆ. ಶಿವಕುಮಾರ್ ಅವರು, ಯುವ ಮುಖಂಡರು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಬಿ.ಎಸ್. ಗಣೇಶ್, ಬಿ.ಎಸ್.ಬಸವೇಶ್ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಗರಸಭಾ ಆಯುಕ್ತರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ಮನವಿ:
ಉಳಿದಿರುವ 1632 ಫಲಾನುಭವಿಗಳಿಗೆ ಮುಂದಿನ ಎರಡು ವರ್ಷಗಳೊಳಗಾಗಿ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಸ್ವಂತ ಮನೆ ಎಂಬ ಕನಸಿನೊಂದಿಗೆ ಕಾಯುತ್ತಿದ್ದ ಫಲಾನುಭವಿಗಳ ಮುಖದಲ್ಲಿ ಮೂಡಿದ ಸಂತೋಷ ಮತ್ತು ನೆಮ್ಮದಿಯನ್ನು ಕಂಡು ನಮ್ಮ ಕೆಲಸ ಸಾರ್ಥಕವಾಯಿತು ಎಂಬ ಭಾವನೆ ಮೂಡಿತು.


