ಶಿವಮೊಗ್ಗ ಮಹಿಳಾ ದಸರಾ ಕ್ರೀಡಾಕೂಟಕ್ಕೆ ಚಾಲನೆ ಗಮನ ಸೆಳೆದ ಮಹಿಳೆಯರು…

ಶಿವಮೊಗ್ಗ ಮಹಿಳಾ ದಸರಾ ಕ್ರೀಡಾಕೂಟಕ್ಕೆ ಚಾಲನೆ

ಗಮನ ಸೆಳೆದ ಮಹಿಳೆಯರು…

ಶಿವಮೊಗ್ಗದಲ್ಲಿ ನಾಡಹಬ್ಬ ದಸರಾ ಅಂಗವಾಗಿ ಮಹಿಳಾ ದಸರಾ ಸಮಿತಿಯ ವತಿಯಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಕ್ರೀಡಾಕೂಟಕ್ಕೆ ಪೌರಕಾರ್ಮಿಕ ಹಿರಿಯ ಮಹಿಳೆಯರಾದ ರಾಧಾ, ಶಾಂತಮ್ಮ ಹಾಗೂ ನರಸಮ್ಮ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಸುವರ್ಣಾ ಶಂಕರ್, ಗ್ಯಾರಂಟಿ ಯೋಜನೆಗಳ ನಿರ್ದೇಶಕರಾದ ಅರ್ಚನಾ ನಿರಂಜನ್, ಅನುಪಮಾ, ಭಾಗ್ಯಾ, ಯಶೋದಾ, ಗೀತಾ ಹಾಗೂ ರೇಣು ಸೇರಿದಂತೆ ಮಹಿಳಾ ದಸರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಾಕ್ಷಾತ್ ದೇವಿ ಅಲಂಕಾರ, ಮನೋರಂಜನಾ ಕ್ರೀಡೆಗಳು, ಅಂತ್ಯಾಕ್ಷರಿ, ಮೆಹೆಂದಿ ಸೇರಿದಂತೆ ಹಲವು ಬಗೆಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.