ಪೊಲೀಸರಿಗೆ ಸೆಲ್ಯೂಟ್ ಮಾಡಲೇಬೇಕಾದ ಸಂದರ್ಭ ಇದು* *ಎಸ್ ಪಿ ಮಿಥುನ್ ಕುಮಾರ್ ಮತ್ತು ಅವರ ತಂಡಕ್ಕೆ ಸೆಲ್ಯೂಟ್*
*ಪೊಲೀಸರಿಗೆ ಸೆಲ್ಯೂಟ್ ಮಾಡಲೇಬೇಕಾದ ಸಂದರ್ಭ ಇದು*
*ಎಸ್ ಪಿ ಮಿಥುನ್ ಕುಮಾರ್ ಮತ್ತು ಅವರ ತಂಡಕ್ಕೆ ಸೆಲ್ಯೂಟ್*
ಶಿವಮೊಗ್ಗದ ಪೊಲೀಸ್ ಠಾಣೆಗಳು ಬಹಳ ಮೆಚ್ಚುಗೆಗೆ, ಪ್ರೀತಿಗೆ,ವಿಶ್ವಾಸಕ್ಕೆ, ಗೌರವಕ್ಕೆ ಪಾತ್ರವಾಗುತ್ತಿವೆ. ತುಂಗಾ ನಗರ, ದೊಡ್ಡಪೇಟೆ ಠಾಣೆ ವ್ಯಾಪ್ತಿಯ ಬಹುತೇಕ ಗಣಪತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಮುಸ್ಲೀಮರು ಪಾಲ್ಗೊಂಡು ಸೇವೆ ಸಲ್ಲಿಸಿರುವುದು ಸಣ್ಣ ಮಾತಲ್ಲ…
ಬೆಂಕಿ ಹಚ್ಚುವ ರಾಜಕಾರಣಿಗಳಿರುವ ಈ ಸಂದರ್ಭದಲ್ಲಿ ಯಾವುದೇ ಕುಯುಕ್ತಿಗೆ ಬಲಿಯಾಗದೇ ಸೌಹಾರ್ದದ ವಾತಾವರಣಕ್ಕೆ ಕಾರಣವಾಗುತ್ತಿರುವ ಗಣಪತಿ ಸೇವಾ ಸಮಿತಿ ಮತ್ತು ಈದ್ ಮಿಲಾದ್ ಕಮಿಟಿಗಳು ಈ ಹೊತ್ತಿನ ಭರವಸೆಗಳು.
ಅಂಥದ್ದೇ ಒಂದು ಭರವಸೆ ಮಿಳಘಟ್ಟದ ಹಿಂದೂ ಮುಸ್ಲಿಂ ಹುಡುಗರು, ಜನ ಸೃಷ್ಟಿಸಿದ್ದಾರೆ.
ಗಣಪತಿ ಮೆರವಣಿಗೆ ಸಂದರ್ಭಗಳಲ್ಲಿ ಮುಸ್ಲಿಂ ಜನ, ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಜನ ಹಣ್ಣು ಹಂಪಲು, ತಂಪು ಪಾನೀಯ, ಅನ್ನ ನೀಡುತ್ತಿರುವುದು, ನೀಡಲು ಸಿದ್ಧ ಮಾಡಿಕೊಂಡಿರುವುದು ಸಣ್ಣ ಮಾತಲ್ಲ.
ಇದಕ್ಕೆಲ್ಲ ಸ್ಫೂರ್ತಿದಾಯಕರಾಗುತ್ತಿರುವುದು ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್. ಅವರ ಜೊತೆ ಕೈ ಜೋಡಿಸಿರುವುದು ತುಂಗಾನಗರದ ಸಿಪಿಐ ಗುರುರಾಜ್,ದೊಡ್ಡಪೇಟೆಯ ರವಿಪಾಟೀಲ್, ಕೋಟೆಯ ಹರೀಶ್ ಪಾಟೀಲ್, ವಿನೋಬನಗರದ ಸಂತೋಷ್…ಹೆಸರುಗಳು ಬಹಳಷ್ಟಿವೆ…
ಶಿವಮೊಗ್ಗ ಜಿಲ್ಲೆಯ ಸೌಹಾರ್ದ ಬಯಸುವ ಜನ ಪೊಲೀಸರಿಗೆ, ಪೊಲೀಸ್ ಇಲಾಖೆಗೆ ನಿಜವಾಗಲೂ ಸೆಲ್ಯೂಟ್ ಮಾಡಲೇಬೇಕಾದ ಸಂದರ್ಭ ಇದು…👍👍
– *ಶಿ.ಜು.ಪಾಶ*
8050112067
(12/09/2025-9.40pm)