ಮೈಸೂರು ಡಿಸ್ಟ್ರಿಕ್ಟ್ ರ್ಯಾಲಿಯಲ್ಲಿ ಶಿವಮೊಗ್ಗದ ಇನ್ನರ್ ವೀಲ್ ಸದಸ್ಯೆಯರ ಸಾಧನೆ..
ಮೈಸೂರು ಡಿಸ್ಟ್ರಿಕ್ಟ್ ರ್ಯಾಲಿಯಲ್ಲಿ ಶಿವಮೊಗ್ಗದ ಇನ್ನರ್ ವೀಲ್ ಸದಸ್ಯೆಯರ ಸಾಧನೆ..
ಮೈಸೂರು: 2026–27ನೇ ಸಾಲಿನ ಇನ್ನರ್ ವೀಲ್ ಕ್ಲಬ್‌ನ ಡಿಸ್ಟ್ರಿಕ್ಟ್ ರ್ಯಾಲಿ ಇತ್ತೀಚೆಗೆ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ‘ದಿವ್ಯ ಸ್ಪಂದನ ISO Meet’ ಕಾರ್ಯಕ್ರಮದಲ್ಲಿ ಶಿವಮೊಗ್ಗದ ವಿವಿಧ ಇನ್ನರ್ ವೀಲ್ ಕ್ಲಬ್‌ಗಳ ISOಗಳು ಉತ್ಸಾಹದಿಂದ ಭಾಗವಹಿಸಿ, ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಪಡೆಯುವ ಮೂಲಕ ಶಿವಮೊಗ್ಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
IWC ಶಿವಮೊಗ್ಗ ಕ್ಲಬ್‌ನ ಶ್ವೇತಾ ಗಿರೀಶ್ ಅವರು ಭಾರತದ ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ವೇಷಭೂಷಣ ಪ್ರದರ್ಶನದಲ್ಲಿ ನಾಲ್ಕನೇ ಬಹುಮಾನ ಪಡೆದುಕೊಂಡಿದ್ದಾರೆ.
IWC ಶಿವಮೊಗ್ಗ ರಿವರ್‌ಸೈಡ್‌ನ ಕವಿತಾ ಜೋಯ್ಸ್ ಅವರು ತಮ್ಮ ವಿಶಿಷ್ಟ ನಗುವಿಗಾಗಿ ‘Smiling Star Award’ ಪಡೆದುಕೊಂಡಿದ್ದಾರೆ.
ಅದೇ ರೀತಿ, IWC ಶಿವಮೊಗ್ಗ ನಾರ್ತ್‌ನ ಪ್ರಜ್ಞಾ ಕಿರಣ್ ಅವರು ‘Lucky Lady’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದ ಮೂರು ಇನ್ನರ್ ವೀಲ್ ಕ್ಲಬ್‌ಗಳ ISOಗಳು ತಮ್ಮ ಪ್ರತಿಭೆ ಹಾಗೂ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಗಮನ ಸೆಳೆದು, ಜಿಲ್ಲೆಗೆ ಹೆಮ್ಮೆ ತಂದಿರುವುದು ವಿಶೇಷವಾಗಿದೆ. ಇವರ ಸಾಧನೆಗೆ ಇನ್ನರ್ ವೀಲ್ ಸದಸ್ಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.


