ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಿ : ಡಾ. ಪ್ರದೀಪ್ ಡಿಮೆಲ್ಲೋ
ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಿ : ಡಾ. ಪ್ರದೀಪ್ ಡಿಮೆಲ್ಲೋ
ಶಿವಮೊಗ್ಗ: ಸಹ ಪೈಲಟ್‌ನಿಂದ ಚಾಕುವಿನಿಂದ ಹಲ್ಲೆಗೊಳಗಾದರೂ, ವಿಮಾನವನ್ನು ಅಪಘಾತಕ್ಕೀಡು ಮಾಡಲು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿ, ಸುಮಾರು 180 ಪ್ರಯಾಣಿಕರ ಜೀವವನ್ನು ಉಳಿಸಲು ಕೊನೆಯ ಕ್ಷಣದವರೆಗೂ ಹೋರಾಡಿದ ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ನಿಜವಾದ ಹೀರೋ ಎಂದು ಡಾ. ಪ್ರದೀಪ್ ಡಿಮೆಲ್ಲೋ ತಿಳಿಸಿದಾರೆ.
ಪತ್ರಿಕರ್ತಾರನ್ನು ಉದ್ದೇಶಿಸಿ ಮಾತನಾಡಿದ ಅವರು, ದುಬೈಯಿಂದ ಸುಮಾರು 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ FZ1073 ವಿಮಾನದ ವ್ಯವಸ್ಥೆಯನ್ನು ಹಾನಿಗೊಳಿಸಲು ಅಥವಾ ವಿಮಾನವನ್ನು ಅಪಾಯಕ್ಕೆ ಸಿಲುಕಿಸಲು ಸಹಪೈಲಟ್ ನಡೆಸಿದ ಪ್ರಯತ್ನಗಳನ್ನು ತಡೆಯಲು ಧೈರ್ಯಶಾಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಹಲವು ಬಾರಿ ಪ್ರಯತ್ನಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಯಾಪ್ಟನ್ ಮಚ್ಚಾರ್ ಅವರು ಚಾಕು ಇರಿತಕ್ಕೆ ಒಳಗಾದರೂ, ಕೊನೆಯ ಕ್ಷಣದವರೆಗೂ ಧೈರ್ಯದಿಂದ ಹೋರಾಡಿ 180 ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ. ಅವರ ಈ ಸಾಹಸದಿಂದ ಭಾರತ ಹೆಮ್ಮೆಪಡುವಂತಾಗಿದೆ. ಇದು ಭಾರತದ ಕೀರ್ತಿಗೆ ಮತ್ತೊಂದು ಗರಿ ಮೂಡಿಸಿದಂತಾಗಿದೆ ಎಂದು ಡಾ. ಪ್ರದೀಪ್ ಡಿಮೆಲ್ಲೋ ಹೇಳಿದರು.


