*ಆಂಧ್ರದ ಪವನ್ ಕಲ್ಯಾಣ್ ರವರ ಜನಸೇನಾ ಸೇರ್ತಾರ ಕೆ.ಎಸ್.ಈಶ್ವರಪ್ಪ?*

*ಆಂಧ್ರದ ಪವನ್ ಕಲ್ಯಾಣ್ ರವರ ಜನಸೇನಾ ಸೇರ್ತಾರ ಕೆ.ಎಸ್.ಈಶ್ವರಪ್ಪ?*

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರವರನ್ನು ಕರೆ ಮಾಡಿ ಜನಸೇನಾ ಪಕ್ಷದ ಕರ್ನಾಟಕದ ನಾಯಕತ್ವ ವಹಿಸಲು ಆಹ್ವಾನಿಸಿದ್ದಾರಾ?

ಬಿಜೆಪಿಯಿಂದ ಹೊರಗುಳಿದು ರಾಷ್ಟ್ರಭಕ್ತರ ಬಳಗದ ಮೂಲಕ ಕ್ರಿಯಾಶೀಲರಾಗಿರುವ ಕೆ.ಎಸ್.ಈಶ್ವರಪ್ಪ ರವರು ಆಂಧ್ರಪ್ರದೇಶದಲ್ಲೂ ಗಮನ ಸೆಳೆಯುತ್ತಿದ್ದಾರೆ. ಅಲ್ಲಿನ ಜನಸೇನಾ ಪಕ್ಷವನ್ನು ಕರ್ನಾಟಕದಲ್ಲೂ ಕಟ್ಟಿ ಬೆಳೆಸಲು ನೇತೃತ್ವ ವಹಿಸಿ ಎಂದು ಸ್ವತಃ ಪವನ್ ಕಲ್ಯಾಣ್ ಆಹ್ವಾನಿಸಿದ್ದಾರೆಂದು ಹೇಳಲಾಗುತ್ತಿದೆ.

ಈ ಬಗ್ಗೆ ಈಶ್ವರಪ್ಪ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.