*ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಿಷ್ಟು;* *ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ…* *ಶಿವಮೊಗ್ಗದಿಂದ 100% ಸ್ಪರ್ಧೆ ಖಚಿತ*

*ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಿಷ್ಟು;*

*ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ…*

*ಶಿವಮೊಗ್ಗದಿಂದ 100% ಸ್ಪರ್ಧೆ ಖಚಿತ*

ಬಿಜೆಪಿ ಬಿಟ್ಟು ಕೊನೆ ಉಸಿರಿರುವವರೆಗೂ ಎಲ್ಲೂ ಹೋಗೋಲ್ಲ. ಶಿವಮೊಗ್ಗದಲ್ಲಿ ಎಂ ಎಲ್ ಎ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ ಎಂದು ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಪವನ್ ಕಲ್ಯಾಣ್ ರವರ ಪಕ್ಷಕ್ಕೆ ಆಹ್ವಾನ, ಬಿಜೆಪಿಗೆ ಘರ್ ವಾಪಸಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಂತೇಶ್ ರನ್ನು ಭೇಟಿ ಮಾಡಿ ಮಾತಾಡಿದ್ದಾರೆ. ಶಿವಮೊಗ್ಗದಲ್ಲಿ ಸ್ಪರ್ಧೆಗೆ ಅವಕಾಶ ಕೊಟ್ಟರಷ್ಟೇ ಮುಂದಿನ ಹೆಜ್ಜೆ. ಮತ್ತೆ ಮೋಸ ಹೋಗುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗದಲ್ಲಿ ಅವರು ಮಾತಾಡಿದರು.