*ಶಿವಮೊಗ್ಗ ವಿದ್ಯಾನಗರ ಮನೆ ಕೋಟಿ ಮೌಲ್ಯದ ಕಳ್ಳತನ ಪ್ರಕರಣ;* *ಹಗರಿಬೊಮ್ಮನಹಳ್ಳಿಯ ರಫೀಕ್ @ ಕರಿಯನನ್ನು ಬಂಧಿಸಿದ ಕೋಟೆ ಪೊಲೀಸರು*

*ಶಿವಮೊಗ್ಗ ವಿದ್ಯಾನಗರ ಮನೆ ಕೋಟಿ ಮೌಲ್ಯದ ಕಳ್ಳತನ ಪ್ರಕರಣ;*

*ಹಗರಿಬೊಮ್ಮನಹಳ್ಳಿಯ ರಫೀಕ್ @ ಕರಿಯನನ್ನು ಬಂಧಿಸಿದ ಕೋಟೆ ಪೊಲೀಸರು*

ಶಿವಮೊಗ್ಗದ ವಿದ್ಯಾನಗರದ ಮನೆಯೊಂದರ ಬೀಗ ಮುರಿದು ಕೋಟಿಗೂ ಹೆಚ್ಚು ಮೌಲ್ಯದ ಬಂಗಾರ, ಬೆಳ್ಳಿ, ನಗದು ಕದ್ದಿದ್ದ ಹಗರಿಬೊಮ್ಮನಹಳ್ಳಿ ಮೂಲದ ಕಳ್ಳ ಮೊಹಮ್ಮದ್ ರಫೀಕ್ @ ಕರಿಯನನ್ನು ಕೋಟೆ ಪೊಲೀಸರು ಬಂಧಿಸಿ ಮಾಲು ವಶ ಪಡಿಸಿಕೊಂಡಿದ್ದಾರೆ.

943 ಗ್ರಾಂ ತೂಕದ ಬಂಗಾರದ ಒಡವೆ, 500 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 86 ಸಾವಿರ ರೂ., ನಗದನ್ನು ಆ.28 ರಂದು ಈ ಕಳ್ಳ ಕದ್ದು ಪರಾರಿಯಾಗಿದ್ದ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್ ಪಿ ನಿಖಿಲ್ ಬಿ. ನಿರ್ದೇಶನದಂತೆ ಅಡಿಷನಲ್ ಎಸ್ ಪಿ ಕಾರಿಯಪ್ಪ, ಡಿವೈಎಸ್ ಪಿ ಶೀಲವಂತ ಹೊಸಮನಿ ಮಾರ್ಗದರ್ಶನದಲ್ಲಿ ಕೋಟೆ ಠಾಣೆ ಇನ್ಸ್ ಪೆಕ್ಟರ್ ಹರೀಶ್ ಪಾಟೀಲ್ ಹಾಗೂ ಸಿಬ್ಬಂದಿ ಧನರಾಜ್, ಆರ್.ವಸಂತ್,ರಾಜು, ವಿ.ಕಿಶೋರ, ಕೆ.ರಂಗನಾಥ್, ಗೊರವರ ಆಂಜಿನಪ್ಪ, ಹೆಚ್.ಎನ್.ನವೀನ್, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಸಿ.ಗುರುರಾಜ್, ಸಿ.ಇಂದ್ರೇಶ್, ತೀರ್ಥಲಿಂಗ್ ರವರನ್ನೊಳಗೊಂಡ ತಂಡ ಕಳ್ಳನ ಬೇಟೆಗೆ ಶ್ರಮಿಸಿದೆ.

ಅ.1 ರಂದು ಕಳ್ಳನನ್ನು ಬಂಧಿಸಿದ ಪೊಲೀಸರು ಆತನಿಂದ 1,02,77,434 ರೂ.,ಗಳ ಮೌಲ್ಯದ ವಸ್ತುಗಳನ್ನು ಅಮಾನತು ಪಡಿಸಿಕೊಂಡಿದ್ದಾರೆ.

ಎಸ್ ಪಿ ನಿಖಿಲ್ ಸಾಧಕ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.