ಚಿತ್ರನಟ ವಿ.ರವಿಚಂದ್ರನ್ ರವರನ್ನು ದಸರಾಕ್ಕೆ ಆಹ್ವಾನಿಸಿದ ಯೋಗೇಶ್ ತಂಡ
ಚಿತ್ರನಟ ವಿ.ರವಿಚಂದ್ರನ್ ರವರನ್ನು ದಸರಾಕ್ಕೆ ಆಹ್ವಾನಿಸಿದ ಯೋಗೇಶ್ ತಂಡ
ಶಿವಮೊಗ್ಗ ನಗರದಲ್ಲಿ ನಡೆಯಲಿರುವ ಯುವದಸರ ಕಾರ್ಯಕ್ರಮದ ಅಂಗವಾಗಿ ಖ್ಯಾತ ಚಲನಚಿತ್ರ ನಟ ಕ್ರೇಜಿಸ್ಟಾರ್ ವಿ ರವಿಚಂದ್ರನ್ ರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಸಿ ಯೋಗೇಶ್ ರವರು ಮಹಾನಗರ ಪಾಲಿಕೆ ಪರವಾಗಿ ಆಹ್ವಾನಿಸಿದರು.
20-10-2026 ತಾರೀಕಿನಂದು ಸಂಜೆ 6 ಗಂಟೆಗೆ ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಸಾಧುಕೋಕಿಲ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಾದ ಶಿವಕುಮಾರ್ ರವರು, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂಎಸ್ ಶಿವಕುಮಾರ್ ರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ, ಮಧು ಉಪಸ್ಥಿತರಿದ್ದರು.


