ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಅವರು ಮತ್ತೆ
ಉರಿಸಲು ಹೊರಟಿದ್ದಾರೆ
ನನ್ನನ್ನು…

ಅವರಿಗೆ ತಿಳಿಸಿಬಿಡು
ಬೂದಿಯಲ್ಲಿ ಮತ್ತೆ
ಬೆಂಕಿ ಹತ್ತುವುದಿಲ್ಲವೆಂದು!

2.
ದುಃಖಗಳು
ಬರಲಿ ಬಿಡು ಹೃದಯವೇ,
ನಮ್ಮವರು
ಯಾರೆಂಬುದು
ಗೊತ್ತಾಗಲಿ!

3.
ಕತ್ತಲಿಗಲ್ಲ
ಕತ್ತಲಲ್ಲಿಡುವವರಿಂದ
ಎಚ್ಚರವಿರು ಹೃದಯವೇ…

– *ಶಿ.ಜು.ಪಾಶ*
8050112067
(15/10/2026)