ಚುನಾವಣಾ ಬಾಂಡ್: ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳು ಯಾವುವು?

ಚುನಾವಣಾ ಬಾಂಡ್: ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳು ಯಾವುವು?

ಹೈದರಾಬಾದ್ ಮೂಲದ ಮೇಘಾ ಸಮೂಹ ಸಂಸ್ಥೆಗಳು ಏಪ್ರಿಲ್ 2019 ಮತ್ತು ಜನವರಿ 2024ರ ನಡುವೆ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ರೂ. 664 ಕೋಟಿ ರೂಪಾಯಿಗಳ ಅತಿ ದೊಡ್ಡ ದೇಣಿಗೆ ನೀಡಿವೆ ಎಂದು ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಹೊಸ ಮಾ ಹಿತಿ ಬಹಿರಂಗಪಡಿಸಿದೆ.
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿರುವ ಉದ್ಯಮಗಳು ಮತ್ತು ವ್ಯಕ್ತಿಗಳು ರೂ.545 ಕೋಟಿ ದೇಣಿಗೆ ನೀಡುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.
ರೂ. 352 ಕೋಟಿ ದೇಣಿಗೆ ನೀಡುವ ಮೂಲಕ ಕೆವೆಂಟರ್ಸ್ ಗ್ರೂಪ್ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ರೂ. 285 ಕೋಟಿ ನೀಡಿರುವ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ರೂ. 236.4 ಕೋಟಿ ನೀಡಿರುವ ಭಾರ್ತಿ ಏರ್‌ಟೆಲ್ ಗ್ರೂಪ್ ಇದೆ.
ಬಿಜೆಪಿ ಏಪ್ರಿಲ್ 2019ರಿಂದ ಜನವರಿ 2024ರವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಒಟ್ಟು ರೂ. 6,060 ಕೋಟಿ ದೇಣಿಗೆಯಲ್ಲಿ ಮೂರನೇ ಒಂದು ಭಾಗ, ಅಂದರೆ ಬರೋಬ್ಬರಿ 2,082 ಕೋಟಿ ರೂಪಾಯಿಯನ್ನು ಮೇಲೆ ತಿಳಿಸಿದ ಕಂಪನಿಗಳು ನೀಡಿವೆ.
ಒಟ್ಟಾರೆಯಾಗಿ, ಮಾರ್ಚ್ 2018ರಿಂದ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ರೂ 8,252 ಕೋಟಿ ಹಣ ಸ್ವೀಕರಿಸಿದೆ. ಮಾರ್ಚ್ 1, 2018 ರಿಂದ ಏಪ್ರಿಲ್ 12, 2019ರ ನಡುವೆ ಪಡೆದ ರೂ. 4,000 ಕೋಟಿ ಮೌಲ್ಯದ ಬಾಂಡ್‌ಗಳ ಮಾಹಿತಿ ಲಭ್ಯವಾಗಿಲ್ಲ.

ಮೇಘಾ ಗ್ರೂಪ್ :
ಮೇಘಾ ಗ್ರೂಪ್ ಬಿಜೆಪಿಗೆ ನೀಡಿದ 664 ಕೋಟಿ ರೂ.ಗಳಲ್ಲಿ 584 ಕೋಟಿ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ನಿಂದ ಬಂದಿದೆ. ಉಳಿದ 80 ಕೋಟಿ ರೂ. ಮೇಘಾ ಗ್ರೂಪ್‌ನ ಅಂಗ ಸಂಸ್ಥೆಯಾದ ಗಾಝಿಯಾಬಾದ್ ಮೂಲದ ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್ ಮಿಷನ್ ಕಂಪನಿಯಿಂದ ಬಂದಿದೆ.
ಒಟ್ಟಾರೆಯಾಗಿ, ಮೇಘಾ ಗ್ರೂಪ್ 1,186 ಕೋಟಿ ರೂಪಾಯಿ ದೇಣಿಗೆಯನ್ನು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದೆ. ಈ ಪೈಕಿ ಬಿಜೆಪಿ ಶೇ.56ರಷ್ಟು ಪಡೆದಿದೆ.
ರಿಲಯನ್ಸ್-ಸಂಯೋಜಿತ ಸಂಸ್ಥೆಗಳು :
ರಿಲಯನ್ಸ್ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳು ಬಿಜೆಪಿಗೆ ಎರಡನೇ ಅತೀ ಹೆಚ್ಚು, ಅಂದರೆ 545 ಕೋಟಿ ರೂ. ದೇಣಿಗೆ ನೀಡಿವೆ. ಈ ಪೈಕಿ 375 ಕೋಟಿ ರೂ. (ಶೇ. 69ರಷ್ಟು) ಮುಂಬೈ ಮೂಲದ ಕ್ವಿಕ್ ಸಪ್ಲೈ ಚೈನ್ ಪ್ರೈವೆಟ್ ಲಿಮಿಟೆಡ್‌ನಿಂದ ಬಂದಿದೆ.
ಉಳಿದ 170 ಕೋಟಿ ರೂ. ಹಣ ಅಂಬಾನಿ ಅವರ ವ್ಯಾಪಾರ ಸಹವರ್ತಿ ಸುರೇಂದ್ರ ಲೂನಿಯಾ, ರಿಲಯನ್ಸ್ ಎಕ್ಸಿಕ್ಯೂಟಿವ್‌ಗಳಾದ ಲಕ್ಷ್ಮಿದಾಸ್ ಮರ್ಚೆಂಟ್ ಮತ್ತು ಕೆ ರಾಮಚಂದ್ರನ್ ರಾಜಾ, ರಿಲಯನ್ಸ್‌ ಗ್ರೂಪ್‌ನ ಹಲವು ಅಂಗ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿರುವ ಸತ್ಯನಾರಾಯಣಮೂರ್ತಿ ವೀರ ವೆಂಕಟ ಕೊರ್ಲೆಪ್‌ಗೆ ಸಂಪರ್ಕ ಹೊಂದಿದ ಸಂಸ್ಥೆಗಳಿಂದ ಬಂದಿದೆ.

ಚುನಾವಣಾ ಬಾಂಡ್: ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳು ಯಾವುವು?

ಹೈದರಾಬಾದ್ ಮೂಲದ ಮೇಘಾ ಸಮೂಹ ಸಂಸ್ಥೆಗಳು ಏಪ್ರಿಲ್ 2019 ಮತ್ತು ಜನವರಿ 2024ರ ನಡುವೆ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ರೂ. 664 ಕೋಟಿ ರೂಪಾಯಿಗಳ ಅತಿ ದೊಡ್ಡ ದೇಣಿಗೆ ನೀಡಿವೆ ಎಂದು ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಹೊಸ ಮಾಹಿತಿ ಬಹಿರಂಗಪಡಿಸಿದೆ.
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿರುವ ಉದ್ಯಮಗಳು ಮತ್ತು ವ್ಯಕ್ತಿಗಳು ರೂ.545 ಕೋಟಿ ದೇಣಿಗೆ ನೀಡುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.
ರೂ. 352 ಕೋಟಿ ದೇಣಿಗೆ ನೀಡುವ ಮೂಲಕ ಕೆವೆಂಟರ್ಸ್ ಗ್ರೂಪ್ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ರೂ. 285 ಕೋಟಿ ನೀಡಿರುವ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ರೂ. 236.4 ಕೋಟಿ ನೀಡಿರುವ ಭಾರ್ತಿ ಏರ್‌ಟೆಲ್ ಗ್ರೂಪ್ ಇದೆ.
ಬಿಜೆಪಿ ಏಪ್ರಿಲ್ 2019ರಿಂದ ಜನವರಿ 2024ರವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಒಟ್ಟು ರೂ. 6,060 ಕೋಟಿ ದೇಣಿಗೆಯಲ್ಲಿ ಮೂರನೇ ಒಂದು ಭಾಗ, ಅಂದರೆ ಬರೋಬ್ಬರಿ 2,082 ಕೋಟಿ ರೂಪಾಯಿಯನ್ನು ಮೇಲೆ ತಿಳಿಸಿದ ಕಂಪನಿಗಳು ನೀಡಿವೆ.
ಒಟ್ಟಾರೆಯಾಗಿ, ಮಾರ್ಚ್ 2018ರಿಂದ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ರೂ 8,252 ಕೋಟಿ ಹಣ ಸ್ವೀಕರಿಸಿದೆ. ಮಾರ್ಚ್ 1, 2018 ರಿಂದ ಏಪ್ರಿಲ್ 12, 2019ರ ನಡುವೆ ಪಡೆದ ರೂ. 4,000 ಕೋಟಿ ಮೌಲ್ಯದ ಬಾಂಡ್‌ಗಳ ಮಾಹಿತಿ ಲಭ್ಯವಾಗಿಲ್ಲ.
ಮೇಘಾ ಗ್ರೂಪ್ :
ಮೇಘಾ ಗ್ರೂಪ್ ಬಿಜೆಪಿಗೆ ನೀಡಿದ 664 ಕೋಟಿ ರೂ.ಗಳಲ್ಲಿ 584 ಕೋಟಿ ಹೈದರಾಬಾದ್ ಮೂಲದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ನಿಂದ ಬಂದಿದೆ. ಉಳಿದ 80 ಕೋಟಿ ರೂ. ಮೇಘಾ ಗ್ರೂಪ್‌ನ ಅಂಗ ಸಂಸ್ಥೆಯಾದ ಗಾಝಿಯಾಬಾದ್ ಮೂಲದ ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್ ಮಿಷನ್ ಕಂಪನಿಯಿಂದ ಬಂದಿದೆ.
ಒಟ್ಟಾರೆಯಾಗಿ, ಮೇಘಾ ಗ್ರೂಪ್ 1,186 ಕೋಟಿ ರೂಪಾಯಿ ದೇಣಿಗೆಯನ್ನು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದೆ. ಈ ಪೈಕಿ ಬಿಜೆಪಿ ಶೇ.56ರಷ್ಟು ಪಡೆದಿದೆ.
ರಿಲಯನ್ಸ್-ಸಂಯೋಜಿತ ಸಂಸ್ಥೆಗಳು :
ರಿಲಯನ್ಸ್ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳು ಬಿಜೆಪಿಗೆ ಎರಡನೇ ಅತೀ ಹೆಚ್ಚು, ಅಂದರೆ 545 ಕೋಟಿ ರೂ. ದೇಣಿಗೆ ನೀಡಿವೆ. ಈ ಪೈಕಿ 375 ಕೋಟಿ ರೂ. (ಶೇ. 69ರಷ್ಟು) ಮುಂಬೈ ಮೂಲದ ಕ್ವಿಕ್ ಸಪ್ಲೈ ಚೈನ್ ಪ್ರೈವೆಟ್ ಲಿಮಿಟೆಡ್‌ನಿಂದ ಬಂದಿದೆ.
ಉಳಿದ 170 ಕೋಟಿ ರೂ. ಹಣ ಅಂಬಾನಿ ಅವರ ವ್ಯಾಪಾರ ಸಹವರ್ತಿ ಸುರೇಂದ್ರ ಲೂನಿಯಾ, ರಿಲಯನ್ಸ್ ಎಕ್ಸಿಕ್ಯೂಟಿವ್‌ಗಳಾದ ಲಕ್ಷ್ಮಿದಾಸ್ ಮರ್ಚೆಂಟ್ ಮತ್ತು ಕೆ ರಾಮಚಂದ್ರನ್ ರಾಜಾ, ರಿಲಯನ್ಸ್‌ ಗ್ರೂಪ್‌ನ ಹಲವು ಅಂಗ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿರುವ ಸತ್ಯನಾರಾಯಣಮೂರ್ತಿ ವೀರ ವೆಂಕಟ ಕೊರ್ಲೆಪ್‌ಗೆ ಸಂಪರ್ಕ ಹೊಂದಿದ ಸಂಸ್ಥೆಗಳಿಂದ ಬಂದಿದೆ.

ಈ ಸಂಸ್ಥೆಗಳು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದ ಒಟ್ಟು ದೇಣಿಗೆಗಳ ಪೈಕಿ ಶೇ. 94ರಷ್ಟು ಬಿಜೆಪಿ ಸ್ವೀಕರಿಸಿದೆ.
ಕೆವೆಂಟರ್ಸ್ ಗ್ರೂಪ್ :
ಕೆವೆಂಟರ್ಸ್ ಗ್ರೂಪ್ ತನ್ನ ನಾಲ್ಕು ಅಂಗ ಸಂಸ್ಥೆಗಳಾದ ಕೆವೆಂಟರ್ ಫುಡ್‌ಪಾರ್ಕ್ ಇನ್ಫ್ರಾ ಲಿಮಿಟೆಡ್ (ಪ್ರಸ್ತುತ ಮ್ಯಾಗ್ನಿಫಿಸೆಂಟ್ ಫುಡ್‌ಪಾರ್ಕ್ಸ್ ಪ್ರಾಜೆಕ್ಟ್ ಲಿಮಿಟೆಡ್) ಎಂಕೆಜೆ ಎಂಟರ್‌ಪ್ರೈಸಸ್, ಮದನ್‌ಲಾಲ್ ಲಿಮಿಟೆಡ್ ಮತ್ತು ಸಾಸ್ಮಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮೂಲಕ ಬಿಜೆಪಿಗೆ 351.92 ಕೋಟಿ ರೂ. ದೇಣಿಗೆ ನೀಡಿದೆ.
ಈ ಪೈಕಿ ಮದನ್‌ಲಾಲ್‌ ಕಂಪನಿ ಮೂಲಕ ಅತೀ ಹೆಚ್ಚು, ಅಂದರೆ 175 ಕೋಟಿ ರೂ. ನೀಡಿದೆ. ಏಪ್ರಿಲ್ 2019 ಮತ್ತು ಜನವರಿ 2024 ರ ನಡುವೆ ಕೆವೆಂಟರ್ ಗ್ರೂಪ್ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಒಟ್ಟು 616.92 ಕೋಟಿ ರೂಪಾಯಿ ದೇಣಿಗೆಯಲ್ಲಿ ಬಿಜೆಪಿ ಶೇ. 57ರಷ್ಟು ಪಡೆದಿದೆ.
ಆದಿತ್ಯ ಬಿರ್ಲಾ ಗ್ರೂಪ್‌:
ಆದಿತ್ಯ ಬಿರ್ಲಾ ಸಮೂಹವು ಬಿಜೆಪಿಗೆ ಚುನಾವಣಾ ಬಾಂಡ್‌ಗಳ ಮೂಲಕ 285 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಈ ಮೂಲಕ ಬಿಜೆಪಿ ಅತೀ ಹೆಚ್ಚು ದೇಣಿಗೆ ನೀಡಿದ ನಾಲ್ಕನೇ ದಾನಿ ಎನಿಸಿಕೊಂಡಿದೆ.
ಐದು ಅಂಗಸಂಸ್ಥೆಗಳಾದ ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್, ಎಬಿಎನ್ಎಲ್ ಇನ್ವೆಸ್ಟ್ಮೆಂಟ್ ಲಿಮಿಟೆಡ್, ಬಿರ್ಲಾ ಕಾರ್ಬನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಉತ್ಕಲ್ ಅಲ್ಯುಮಿನಾ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಮತ್ತು ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್ ಮೂಲಕ ಆದಿತ್ಯ ಬಿರ್ಲಾ ಗ್ರೂಪ್ ಬಿಜೆಪಿಗೆ ದೇಣಿಗೆ ನೀಡಿದೆ.
ಬಿರ್ಲಾ ಗ್ರೂಪ್‌ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದ ಒಟ್ಟು 555.8 ಕೋಟಿ ರೂಪಾಯಿ ದೇಣಿಗೆಯಲ್ಲಿ ಬಿಜೆಪಿ ಶೇ. 51ರಷ್ಟು ಪಡೆದಿದೆ.

ಇಂಡಿಯಾ ಟುಡೇ ಜೊತೆ ಸಂಪರ್ಕ ಹೊಂದಿರುವ ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್‌ ಬಿಜೆಪಿಗೆ ಸುಮಾರು 59 ಕೋಟಿ ರೂ. ನೀಡಿರುವುದು ಇಲ್ಲಿ ಗಮನಾರ್ಹ

ಇಂಡಿಯಾ ಟುಡೇ ಗ್ರೂಪ್‌ನ ಪ್ರಮುಖ ಹೋಲ್ಡಿಂಗ್ ಕಂಪನಿ ಲಿವಿಂಗ್ ಮೀಡಿಯಾ ಲಿಮಿಟೆಡ್ ಇದು ಶೇ. 51.61 ಶೇರ್ ಹೊಂದಿದ್ದು, ಉಳಿದ ಶೇ. 41.5 ಶೇರ್ ಅನ್ನು ಐಜಿಹೆಚ್ ಹೋಲ್ಡಿಂಗ್ಸ್ ಗ್ರೂಪ್ ಜೊತೆ ಹಂಚಿಕೊಂಡಿದೆ. ಐಜಿಹೆಚ್ ಕಂಪನಿಯು ಎಸ್ಸೆಲ್ ಮೈನಿಂಗ್ ಮತ್ತು ಇಂಡಸ್ಟ್ರೀಸ್‌ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾಗಿದೆ.
ಭಾರ್ತಿ ಏರ್ಟೆಲ್ ಗ್ರೂಪ್:
ಸುನಿಲ್ ಭಾರ್ತಿ ಮಿತ್ತಲ್ ನೇತೃತ್ವದ ಭಾರ್ತಿ ಏರ್‌ಟೆಲ್ ಗ್ರೂಪ್, ಭಾರ್ತಿ ಏರ್‌ಟೆಲ್ ಲಿಮಿಟೆಡ್, ಭಾರ್ತಿ ಏರ್‌ಟೆಲ್ ಕರೆಂಟ್ ಎಸಿ ಜಿಸಿಒ, ಭಾರ್ತಿ ಇನ್‌ಫ್ರಾಟೆಲ್ ಮತ್ತು ಭಾರ್ತಿ ಟೆಲಿಮೀಡಿಯಾ ಎಂಬ ನಾಲ್ಕು ಸಂಸ್ಥೆಗಳ ಮೂಲಕ ಬಿಜೆಪಿಗೆ ರೂ. 236.4 ಕೋಟಿ ದೇಣಿಗೆ ನೀಡಿದೆ.
ಏರ್ಟೆಲ್ ಗ್ರೂಪ್‌ನ ನಾಲ್ಕು ಅಂಗ ಸಂಸ್ಥೆಗಳ ಪೈಕಿ ಭಾರ್ತಿ ಏರ್‌ಟೆಲ್ ಲಿಮಿಟೆಡ್‌ 183 ಕೋಟಿ ರೂ. ದೇಣಿಗೆಯನ್ನು ಬಿಜೆಪಿಗೆ ನೀಡಿದೆ.
(ನಾನು ಗೌರಿ.ಕಾಂ ಕೃಪೆ)