ಬಿಜೆಪಿ- ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಯಾರೆಲ್ಲ ಮಾತಾಡಿದ್ರು? ಏನೆಲ್ಲ ಮಾತಾಡಿದ್ರು?*

*ಬಿಜೆಪಿ- ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಯಾರೆಲ್ಲ ಮಾತಾಡಿದ್ರು? ಏನೆಲ್ಲ ಮಾತಾಡಿದ್ರು?*

*ಶಿವಮೊಗ್ಗ ಲೋಕಸಭಾಕ್ಷೇತ್ರದ ಉಸ್ತುವಾರಿ, ಮಾಜಿ ಸಚಿವ *ರಘುಪತಿ ಭಟ್*

ರಾಷ್ಟ್ರೀಯ ನಾಯಕರು, ಮಾಜಿ ಪ್ರಧಾನಿ ದೇವೇಗೌಡರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಈ ಸಮನ್ವಯ ಚುನಾವಣೆ. ಹೊಂದಾಣಿಕೆಯ ಸಂಬಂಧ ಹೆಚ್ಚಿದೆ. ಎಲ್ಲ ಸಭೆ, ಸಮಾರಂಭಗಳಲ್ಲಿ ಸಮನ್ವಯತೆ ಸಾಧಿಸುತ್ತಿದ್ದೇವೆ.

ನೇರ ಸ್ಪರ್ಧೆಗೆ ಹಲವು ಸೂತ್ರಗಳನ್ನು ಮಾಡಿದ್ದೇವೆ. ಅಭ್ಯರ್ಥಿ ರಾಘವೇಂದ್ರರ ಎಲ್ಲ ಪ್ರಚಾರದ ವಸ್ತುಗಳಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಎಂದಿರುತ್ತೆ. ಕಮಲದ ಗುರುತಲ್ಲಿ ಸ್ಪರ್ಧೆ. ಮನೆ ಮನೆ ಪ್ರಚಾರ ಎರಡೂ ಪಕ್ಷಗಳ ಕಾರ್ಯಕರ್ತರು ಮಾಡಲಿದ್ದಾರೆ.

ಜೆಡಿಎಸ್ ನ ಒಂದೂ ಮತಗಳು ಬೇರೆಕಡೆ ಹೋಗದ ರೀತಿಯಲ್ಲಿ ಗ್ರಾಮಾಂತರ ಸಭೆ ಆಗಿದೆ. ಗ್ರಾಪಂ, ಜಿ ಪಂ ಮಟ್ಟದಲ್ಲಿ ಪ್ರಚಾರ ವ್ಯವಸ್ಥಿತವಾಗಿ ನಡೆಯಲಿದೆ.
ಬೂತ್ ಮಟ್ಟದಲ್ಲಿಯೂ ಜೊತೆಯಾಗಿ ಕಾರ್ಯಕರ್ತರು ಪ್ರಚಾರ ಮಾಡಿ ದೊಡ್ಡ ಲೀಡ್ ರಾಘವೇಂದ್ರರಿಗೆ ತಂದುಕೊಡಲಿದ್ದೇವೆ.

ಬಿಜೆಪಿಯ ಎಲ್ಲ ಸಭೆಗಳಲ್ಲಿ ಜೆಡಿಎಸ್ ಗೆ ಸ್ಥಾನ ಕೊಡುತ್ತಿದ್ದೇವೆ. ಶಿವಮೊಗ್ಗ ಗ್ರಾಮಾಂತರ ದೊಡ್ಡ ಜೆಡಿಎಸ್ ಶಕ್ತಿ ಇರುವ ಪ್ರದೇಶ. ಇಲ್ಲಿ ಹೆಚ್ಚಿನ ಬಹುಮತ ಸಿಗಲಿದೆ.

*ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ;*
ಹೈಕಮಾಂಡ್ ಆದೇಶದ ಮೇರೆಗೆ ಜೆಡಿಎಸ್ ಪ್ರಬಲವಾಗಿರೋ ಪ್ರದೇಶದಲ್ಲಿ ನನ್ನ ಕ್ಷೇತ್ರ ಕೂಡ ಜವಾಬ್ದಾರಿಯುತವಾಗಿದೆ. ಭಯವಿಲ್ಲದೇ ಸಮನ್ವಯ ಹೋರಾಟ ಹರಿಗೆ ವಾರ್ಡಿನಿಂದ ಪ್ರಚಾರ ಆರಂಭಿಸಿದ್ದೇನೆ.

ಮೂರು ಬಾರಿ ಸಂಸದರಾಗಿರುವ ರಾಘವೇಂದ್ರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬೆಂಬಲಿಸಲು ಎಲ್ಲರೂ ತೀರ್ಮಾನ ಮಾಡಿದ್ದೇವೆ.

ಹಿಂದೆ ವಿರುದ್ಧವಾಗಿ ಕೆಲಸ ಮಾಡಿದ್ದೆವು.ಈಗ ಬೆಂಬಲಿಸಿ ಕೆಲಸ ಮಾಡುವುದರಲ್ಲಿ ಅನುಮಾನ ಬೇಡ.

*ಮಾಜಿ ಶಾಸಕ ಕೆ.ಬಿ. ಅಶೋಕ ನಾಯ್ಕ;*
ರಾಷ್ಟ್ರೀಯ, ರಾಜ್ಯ ನಾಯಕರ ನಿರ್ಣಯದಂತೆ ಸಮನ್ವಯ ಪ್ರಚಾರ. ಜೆಡಿಎಸ್ ಅಭ್ಯರ್ಥಿಗಳಿದ್ದ ಕಡೆ ಬಿಜೆಪಿ, ಬಿಜೆಪಿ ಅಭ್ಯರ್ಥಿ ಇದ್ದ ಕಡೆ ಜೆಡಿಎಸ್ ಬೆಂಬಲ. 28 ಕ್ಷೇತ್ರಗಳಲ್ಲೂ ಗೆಲ್ಲಿಸುವ ಕೆಲಸ ಪರಸ್ಪರ ಆಗುತ್ತಿದೆ.
ತಳಮಟ್ಟದ ಕಾರ್ಯಕರ್ತರ ಮಧ್ಯೆ ಸಮನ್ವಯದ ಕೊರತೆ ಇರುತ್ತೆ. ಅದನ್ನು ಸರಿಪಡಿಸುವ ಕೆಲಸ ನಡೆದಿದೆ. ಅತಿ ಹೆಚ್ಚಿನ ಕೆಲಸ ಮಾಡಬೇಕಿದೆ. ಗೊಂದಲಕ್ಕೆ ಅವಕಾಶ ಇಲ್ಲದಂತೆ ಸಭೆಗಳು ನಡೆಯಲಿವೆ.

1.60 ಲಕ್ಷಕ್ಕಿಂತ ಹೆಚ್ಚಿನ ಮತಗಳು ಶಿವಮೊಗ್ಗ ಗ್ರಾಮಾಂತರದಿಂದ ಕೊಡಿಸಲು ಬದ್ಧರಾಗಿದ್ದೇವೆ. ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಗಳು ನಿರಂತರವಾಗಿ ಇರುತ್ತವೆ.

*ಎಂಎಲ್ ಸಿ ಎಸ್.ಎಲ್.ಭೋಜೇಗೌಡ;*
ಹೊಂದಾಣಿಕೆ ಹಿರಿಯರ ಸಮ್ಮುಖದಲ್ಲಿ ಆಗಿದೆ. ಶೇ.97 ರಷ್ಟು ಕಾರ್ಯಕರ್ತರು ಸ್ವಾಗತಿಸಿದ್ದಾರೆ‌. ಯಾವ ನಮ್ಮ ಶಾಸಕರೂ ಹೊರಕ್ಕೆ ಹೋಗಿಲ್ಲ.ಈ ಹೊಂದಾಣಿಕೆ ಒಪ್ಪಿದ್ದಾರೆ. ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಹೊಸದಲ್ಲ. ಜಂಟಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡಿದೆ.
ಕಾಂಗ್ರೆಸ್ ಜೊತೆಗಿನ ಸರ್ಕಾರ ಸಫಲವಾಗಿಲ್ಲ.

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಈ ಸಮನ್ವಯ ನಿರ್ಧಾರ ಕೈಗೊಳ್ಳಲಾಗಿದೆ. ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

ಪಾರ್ಲಿಮೆಂಟ್ ಫಲಿತಾಂಶ ನಿಮಗೆ ಉತ್ತರ ಕೊಡಲಿದೆ. ದೇಶದ ದೃಷ್ಟಿಯಿಂದ ಈ ನಿರ್ಧಾರ ಸೂಕ್ತವಾದುದು.

ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್, ಕಡಿದಾಳ್ ಗೋಪಾಲ್, ಕೆ.ಜಿ.ಕುಮಾರ ಸ್ವಾಮಿ, ಡಾ.ಧನಂಜಯ ಸರ್ಜಿ, ರಾಮಕೃಷ್ಣ, ಶ್ರೀಮತಿ ಗೀತಾ, ಕಾಂತರಾಜ್ ಸೋಮಿನಕೊಪ್ಪ, ದೀಪಕ್ ಸಿಂಗ್, ವಿನ್ಸೆಂಟ್, ಸಿದ್ದಪ್ಪ ಮತ್ತಿತರರಿದ್ದರು